ಕಿರಾಣಿ ಅಂಗಡಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ


ದಾವಣಗೆರೆ: ಇಲ್ಲಿನ ಹೆಚ್ ಪಿಎಸ್ ನಗರದಲ್ಲಿರುವ  ಕಿರಾಣಿ ಮತ್ತು ಜನರಲ್ ಸ್ಟೋರ್ ಗೆ ನಿನ್ನೆ ತಡ ರಾತ್ರಿ  ಬೆಂಕಿ ತಗುಲಿ ಅಪಾರ ಪ್ರಮಾಣದ  ಹಾನಿಯಾಗಿರುವ  ಘಟನೆ ನಡೆದಿದೆ.

ಬಸವರಾಜ ಎಂಬುವರಿಗೆ ಸೇರಿದ ಸ್ಟೋರ್ ಗೆ  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಸುಮಾರು 9 ಲಕ್ಷ ಮೌಲ್ಯದ ದಾಸ್ತಾನು ,ಜೆರಾಕ್ಸ್ ಯಂತ್ರಗಳು ಭಸ್ಮವಾಗಿವೆ. 

ಜವಾಬ್ದಾರಿ ಮರೆತ ಮಹಾನಗರ ಪಾಲಿಕೆ ಅಧಿಕಾರಿಗಳು ಘಟನಾ  ಸ್ಥಳಕ್ಕೆ ಬಾರದೆ ಇರುವುದರಿಂದ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಗಾಂಧಿನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ. 

Leave a Reply

Your email address will not be published.