ದಾವಣಗೆರೆ ಉತ್ತರ ಕ್ಷೇತ್ರದಿಂದ ನಾನು ಜೆಡಿಎಸ್ ಟಿಕೇಟ್ ಆಕಾಂಕ್ಷಿ: ಸಂಗೇಗೌಡರು


ದಾವಣಗೆರೆ: ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದಿಂದ ನಾನು ಜೆಡಿಎಸ್ ಟಿಕೇಟ್ ಆಕಾಂಕ್ಷಿ ಎಂದು ಜೆಡಿಎಸ್ ಉತ್ತರ ವಿಧಾನ ಸಭಾ ಕ್ಷೇತ್ರದ ಅದ್ಯಕ್ಷ ಸಂಗೇಗೌಡರು ಹೇಳಿದ್ದಾರೆ. 

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಒಂದು ವೇಳೆ  ಟಿಕೇಟ್ ಸಿಗದೇ ಇದ್ದರೂ, ಪಕ್ಷ  ಯಾರಿಗೆ  ಟಿಕೆಟ್ ನೀಡಿದರೂ ಅವರಿಗೆ ಸಹಕಾರ ಮಾಡುತ್ತೇನೆ. ದಾವಣಗೆರೆಯಲ್ಲಿ ಮನೆ ಮನೆ ಕುಮಾರಣ್ಣ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಬಾರಿ ಜೆಡಿಎಸ್ ಗೆ ಮತದಾರರು ಆಶಿರ್ವಾದ ಮಾಡಬೇಕು ಎಂದು ಕೋರಿದರು.

 

ಕ್ಷೇತ್ರದ ಸಂಸದ ಮತ್ತು ಶಾಸಕರು ಸಾರ್ವಜನಿಕ ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲರಾಗಿದ್ದಾರೆ. ಸಣ್ಣ ಕೆಲಸಕ್ಕೂ ಲಂಚ ಕೊಡುವ ಸ್ಥಿತಿ ಎದುರಾಗಿದ್ದು ದಾವಣಗೆರೆ ಹಂದಿ ಬಿಡಾರಿಗಳ ನಗರವಾಗಿದೆ ಎಂದು ಸಂಗೇಗೌಡರು ಆರೋಪಿಸಿದರು.

ದಾವಣಗೆರೆಯ ಅಶೋಕ ರೈಲ್ವೆ ಸಮಸ್ಯೆಯನ್ನು ಬಗೆಹರಿಸಿಲ್ಲ. ಸ್ಮಾರ್ಟ್ ಸಿಟಿಯ ಪರಿಕಲ್ಪನೆ ಕಲ್ಪನೆಯನ್ನು ಈಡೇರಿಸಿಲ್ಲ ಎಂದು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ವಿರುದ್ಧ ವಾಗ್ದಾಳಿ ನಡೆಸಿದರು. 

Leave a Reply

Your email address will not be published.