ದಾವಣಗೆರೆ ಕ್ರಷರ್ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ


ದಾವಣಗೆರೆ: ಆದಾಯ ತೆರಿಗೆ ಪಾವತಿ ಲೋಪದ ಹಿನ್ನೆಲೆಯಲ್ಲಿ ಕ್ರಷರ್ ಉದ್ಯಮಿಗಳಾದ ದಾವಣಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವನಗೌಡ ಮತ್ತು ಗಿರೀಶ್ ಎಂಬುವರ ಮನೆ ಮೇಲೆ ನಿನ್ನೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಸಮೀಪವಿರುವ ಬೇವಿನಹಳ್ಳಿಯಲ್ಲಿ ಇರುವ ಬಸವನಗೌಡ ಅವರಿಗೆ ಸೇರಿದ 2 ಕ್ರಷರ್ ಕಚೇರಿಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದರ ಜತೆ ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿ ಇರುವ ಗಿರೀಶ್‍ರವರ ಮನೆ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.