ಸಾಲಭಾದೆ: ಹಾವೇರಿಯಲ್ಲಿ ರೈತ ಆತ್ಮಹತ್ಯೆ


ಹಾವೇರಿ: ಸಾಲಭಾದೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಸೋಮಪ್ಪ ಚತ್ರಮನಿ (40) ಆತ್ಮಹತ್ಯೆ ಶರಣಾದ ರೈತ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ 2 ಲಕ್ಷ ಕ್ಕೂ ಹೆಚ್ಚು  ಸಾಲ ಮಾಡಿದ್ದ ಮಳೆ ಇಲ್ಲದೆ ಬೆಳೆದ ಬೆಳೆ ಕೈ ಕೊಟ್ಟ ಹಿನ್ನಲೆ ಮನನೊಂದು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.