ವೈದ್ಯರ ಯಡವಟ್ಟಿನಿಂದ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು…!


ಹುಬ್ಬಳ್ಳಿ: ಸದಾ ಒಂದಿಲ್ಲದೊಂದು ಸುದ್ದಿಯಲ್ಲಿರುವ ಕಿಮ್ಸ್ ಆಸ್ಪತ್ರೆ ಮಂಗಳವಾರ ರಾತ್ರಿ ನವಜಾತ ಶಿಶುವೊಂದು ವೈದ್ಯರ ಯಡವಟ್ಟಿನಿಂದ ಮೃತಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ನಗರದ ಜನ್ನತ್ ನಗರದ ಶಾಹೀದಾ ಸಲಿಂ ಅಹಮದ್ ಗೋಡೆಸವಾರ್ ಎಂಬ ಮಹಿಳೆ ಹೆರಿಗೆಯಾಗಿ ಚಿಕಿತ್ಸೆ ಗೆಂದು ಆಸ್ಪತ್ರೆಗೆ ಬಂದರೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಮಹಿಳೆ ಸಂಬಂಧಿಗಳು ಆರೋಪಿಸುತ್ತಿದ್ದಾರೆ.

ಮಂಗಳವಾರ ಸಾಯಂಕಾಲ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಶಿಶುವನ್ನು  ಕಿಮ್ಸ್ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಆದರೆ  ಕಿಮ್ಸ್ ವೈದ್ಯರು ಒಂದು ಗಂಟೆಯಾದ್ರು ಚಿಕಿತ್ಸೆ ನೀಡಿದೆ ನಿರ್ಲಕ್ಷ್ಯವಹಿಸಿದ್ದರಿಂದ  ಮಗು ಸಾವನ್ನಪ್ಪಿದೆ ಎಂದು ಸಂಬಂಧಿಗಳು ಆರೋಪಿಸುತ್ತಿದ್ದಾರೆ.

ವೈದ್ಯರ ನಿರರ್ಲಕ್ಷ್ಯ ಧೋರಣೆಯಿಂದ ರೊಚ್ಚಿಗೆದ್ದ ಸಂಬಂಧಿಗಳು ಕಿಮ್ಸ್ ವೈದ್ಯರನ್ನು ತರಾಟೆಗೆ ತಗೆದುಕೊಂಡಿದ್ದಾರೆ.‌ ಪರಸ್ಥಿತಿ ಕೈ ಮೀರುವುದನ್ನು ಅರಿತ ಕಿಮ್ಸ್ ವೈದ್ಯರು ವಿದ್ಯಾನಗರ ಪೊಲೀಸರನ್ನು ಕರೆಸಿಕೊಂಡಿದ್ದಾರೆ.‌ ಪೊಲೀಸರು ಸಂಬಂಧಿಗಳನ್ನು ಮನವೊಲಿಸಲು ಯತ್ನಿಸಿದರು. ಆದ್ರೆ ಖಾಸಗಿ ಆಸ್ಪತ್ರೆಯ ವೈದ್ಯರು ಯಾಕೆ ಮಗುವನ್ನು ಕಿಮ್ಸ್ ಗೆ ಕಳುಹಿಸಿಕೊಟ್ಟರು ಎಂಬ ಅನುಮಾನ ಕಾಡುತ್ತಿದೆ. ಇದರಲ್ಲಿ ಯಾರ ವೈಫಲ್ಯವಿದೆ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published.