ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ‌ ನೈತಿಕ ಪೊಲೀಸ್ ಗಿರಿ ಮಾಡುವರ ವಿರುದ್ದ ಕಠಿಣ ಕ್ರಮ : ಪೊಲೀಸ್ ಆಯುಕ್ತ ಎಮ್ ಎನ್ ನಾಗರಾಜ್


ಹುಬ್ಬಳ್ಳಿ: ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ‌ ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ದ ಕಠಿಣ ಕ್ರಮ‌ಕೈಗೊಳ್ಳಲಾಗುವದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ಹಾಗೂ ಕ್ರಾಂತಿ ಸೇನೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ, ಪ್ರೇಮಿಗಳ ದಿನಾಚರಣೆಯನ್ನು ಸಂಸ್ಕ್ರತಿ ರಕ್ಷಣಾ ದಿನಾಚರಣೆ ಆಚರಿಸುವ ಜೊತೆಗೆ ಅಸಭ್ಯ ಹಾಗೂ ಸಂಸ್ಕ್ರತಿ ಹಾಳು ಮಾಡುವವರನ್ನು ತಡೆಯಲಾಗುವದು ಎಂದು ಪ್ರೇಮಿಗಳಿಗೆ ಭಯದ ವಾತಾವತಣ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಪ್ರೇಮಿಗಳಿಗೆ ದಾಳಿ ಮಾಡಿ ತೊಂದರೆ ನೀಡಬಹುದು ಎಂಬ ಕಾರಣಕ್ಕೆ ‌ಪೊಲೀಸ್ ಇಲಾಖೆ ಎಲ್ಲಾ ಸಿದ್ದತೆ ಮಾಡಿಕೊಂಡಿದೆ.

ಪ್ರೇಮಿಗಳ ದಿನಾಚರಣೆ ವಿರೋಧಿಸುವ ಸಂಘಟನೆಗಳು ಯುವಕರಲ್ಲಿ ‌ಜಾಗೃತಿ, ತಿಳುವಳಿಕೆ ಮೂಡಿಸಲಿ, ಅದನ್ನು ಬಿಟ್ಟು ಹಲ್ಲೆ ಮಾಡುವದು ಕಿರುಕುಳ‌ ನೀಡುವವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದರು.

ಅವಳಿನಗರದ ನೃಪತುಂಗ ಬೆಟ್ಟ, ಇಂದಿರಾಗಾಜಿನ‌ಮನೆ ಸೇರಿದಂತೆ ವಿವಿಧ ಕಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published.