ಜಮಖಂಡಿ: ದಲಿತ ವಚನಕಾರರ ಜಯಂತಿ ಆಚರಣೆ

 


ಜಮಖಂಡಿ: ದಲಿತ ವಚನಕಾರರ ಜಯಂತಿಯನ್ನು ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾ ದಂಡಾಧಿಕಾರಿಗಳಾದ ಪ್ರಶಾಂತ ಚನಗೊಂಡರವರ ನೇತ್ರತ್ವದಲ್ಲಿ ಆಚರಿಸಲಾಯಿತು.

ಮಾದಾರ ಚನ್ನಯ್ಯ, ಢೋರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಗುರಲಿಂಗ ಪೆದ್ದ ಈ ಐದು ವಚನಕಾರರ ಭಾವ ಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ತಹಶೀಲ್ದಾರ ಪ್ರಶಾಂತ ಚನಗೊಂಡರವರು ಈ ಬಾರಿ ಸಮಯದ ಅಭಾವದಿಂದ ಅದ್ದುರಿಯಾಗಿ ಮಾಡಲು ಆಗದಿದ್ದುದರಿಂದ ಮುಂದಿನ ವರ್ಷದಿಂದ ಅದ್ದೂರಿಯಾಗಿ ಈ ಐದು ವಚನಕಾರರ ಜಯಂತಿಯನ್ನು ವಿಜೃಂಬನೆಯಿಂದ ಆಚರಿಸೋಣಾ ಎಂದು ಸಮಾಜದ ಭಾಂದವರಿಗೆ ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಹಾಗು ನ್ಯಾಯವಾದಿಗಳಾದ ದಿಲೀಪ ಜೋಗದಂಡೆ, ಅರ್ಜುನ ಬಾರಸ್ಕಳೆ, ಬಸವರಾಜ ಹೊಸಮನಿ, ಪರಶುರಾಮ ಕಾಂಬಳೆ, ಪರಶುರಾಮ ಮರೆಗುದ್ದಿ, ಆತ್ಮಾರಾಮ ಕಾಂಬಳೆ, ಅಪ್ಪಾಸಾಬ ಮನಗೂಳಿ ಸೇರಿದಂತೆ ಎಲ್ಲ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.

Leave a Reply

Your email address will not be published.