ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ, ಪ್ಲಸ್ ಪಾಯಿಂಟ್ ಅಂದ್ರೆ ನಾವು ಸುಳ್ಳು ಹೇಳಲ್ಲ: ರಾಹುಲ್ ಗಾಂಧಿ

 


ಕಲಬುರಗಿ: ನಮ್ಮ ಸರಕಾರ ನುಡಿದಂತೆ ನಡೆಯುತ್ತದೆ…ನಮ್ಮ ಪ್ಲಸ್ ಪಾಯಿಂಟ್ ಅಂದ್ರೆ ನಾವು ಸುಳ್ಳು ಹೇಳಲ್ಲ…371(j) ಮಾಡುವಾಗ ಅಡ್ವಾಣಿ ವಿರೋಧಿಸಿದ್ದರು…ನಾನು ಈ ಭಾಗಕ್ಕೆ ಬಂದಾಗ ಇಲ್ಲಿನ ಜನರ ಪರಿಸ್ಥಿತಿ ನೋಡಿದ್ದೆ…ಅದಕ್ಕೆ 371(j) ಮಾಡಿದೇವು ಎಂದು ಎಐಸಿಸಿ ಅದ್ಯಕ್ಷ ತಾಹುಲ್ ಗಾಂಧಿ ಹೇಳಿದರು.

ಜೇವರ್ಗಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ನರೇಂದ್ರ ಮೋದಿ ಸುಳ್ಳು ಹೇಳಿದ್ರು…ಯುವಕರಿಗೆ ಎರಡು ಕೋಟಿ ಉದ್ಶೋಗˌ ಪ್ರತಿಯೊಬ್ಬ ಭಾರತೀಯ ಪ್ರಜೆಗೆ 15 ಲಕ್ಷ ಹಾಕ್ತೇನೆ ಅಂತ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು 15 ಲಕ್ಷ ಬಿಡಿ 10 ರೂ ಹಾಕಿಲ್ಲ ಎಂದು ಟೀಕಿಸಿದರು.

ದಲಿತರುˌ, ಹಿಂದುಳಿದವರ ಹಿತಕ್ಕಿಂತ ಕೆಲವೆ ಕೆಲವು ಶ್ರೀಮಂತರ ಹಿತವನ್ನ ಮೋದಿ ಕಾಪಾಡುತ್ತಿದ್ದಾರೆ ಎಂದು  ವಾಗ್ದಾಳಿ ನಡೆಸಿದರು.

Leave a Reply

Your email address will not be published.