ಕಲಬುರಗಿ: ಕಳಪೆ ಕಾಮಗಾರಿ ಸಾರ್ವಜನಿಕರಿಂದ ಆಕ್ಷೇಪ


ಕಲಬುರಗಿ: ಇಲ್ಲಿನ ನಂದಿ ಕಾಲೋನಿ ವಾರ್ಡ ನಂ 8 ರಲ್ಲಿ ಡ್ರೈನೆಜ್ ದುರಸ್ತಿ ವೇಳೆ ರಸ್ತೆ ಮಧ್ಯೆ ಗುಂಡಿ ತೋಡಿದ್ದು, ನಂತರ ಕಳಪೆ ಮಟ್ಟದ ಕಾಮಗಾರಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಗರದ ಉತ್ತರ ವಲಯದ ನಂದಿ ಕಾಲೋನಿಯಲ್ಲಿ ಡ್ರೈನೇಜ್ ದುರಸ್ತಿಗಾಗಿ ಕಳದೆ ಕೆಲವು ದಿನಗಳ ಹಿಂದೆ ರಸ್ತೆ ಮಧ್ಯೆ ಗುಂಡಿಯನ್ನು ತೋಡಲಾಗಿತ್ತು. ಇದೀಗ  ಡ್ರೈನೇಜ್ ದುರಸ್ತಿ  ಕಾಮಗಾರಿ ಮುಗಿದಿದೆ. ಆದರೆ ಸಂಪೂರ್ಣ ರಸ್ತೆ ದುರಸ್ತಿ ಮಾಡದೇ ದೊಡ್ಡ ಮಟ್ಟದ ಗುಂಡಿಗಳನ್ನು ಮುಚ್ಚಿ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿಸಿದ್ದಾರೆ ಎಂದು ಕಾಲೋನಿ ನಿವಾಸಿಗಳು ದೂರಿದ್ದಾರೆ.

ಈ ರಸ್ತೆ ಮೂಲಕ ಜನರು ಬೇರೆಡೆಗೆ ಸಾಗಬೇಕಾದರೆ ಹರಸಾಹಸ ಪಡಬೇಕಿದ್ದು, ಕಳಪೆ ಕಾಮಗಾರಿಯಲ್ಲಿ ಭಾಗಿಯಾದ  ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published.