ರಜಿನಿಕಾಂತ್ ಅವರದ್ದು ಕೇಸರಿ ಬಣ್ಣ ಆಗಿರಕ್ಕಿಲ್ಲ: ಕಮಲ್ ಹಾಸನ್


ಹೊಸದಿಲ್ಲಿ: ಅಮೆರಿಕಾ ಪ್ರವಾಸದಲ್ಲಿರುವ ಬಹುಭಾಷಾ ನಟ ಕಮಲ್ ಹಾಸನ್,  ಭ್ರಷ್ಟಾಚಾರ ಮುಕ್ತ ತಮಿಳುನಾಡು ನಿರ್ಮಾಣ, ತಮ್ಮ ಕನಸು ಆಗಿದ್ದು ಕೆಂಪು ನನ್ನ ರಾಜಕೀಯ ಹೊದಿಕೆ ಅಲ್ಲ ಎಂದು ಹೇಳಿದ್ದಾರೆ.

ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಪೀಪಲ್ ರೈಟ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಕಮಲ್ ಹಾಸನ್ , ರಜಿನಿಕಾಂತ್ ಜೊತೆಗಿನ ರಾಜಕೀಯ ಮೈತ್ರಿಯ ಬಗ್ಗೆಯೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 

ಸದ್ಯದ ಪರಿಸ್ಥಿತಿಗೆ ಮೈತ್ರಿ ಅಸಾಧ್ಯವಾಗಿದ್ದು, ರಜಿನಿಕಾಂತ್ ಅವರದ್ದು ಕೇಸರಿ ಬಣ್ಣವಾಗಿರಲಾರದು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

“ನಮ್ಮ ಸಿದ್ದಾಂತವೇ ಬೇರೆಯಾಗಿದೆ. ರಜಿನಿಕಾಂತ್ ಅವರ ಮೊದಲ ಘೋಷಣೆ ಬೇರೆಯದೇ ರೀತಿಯಲ್ಲಾಗಿತ್ತು. ಅವರದು  ಕೇಸರಿ ಬಣ ಅಲ್ಲವೆಂದು ನನಗೆ ವಿಶ್ವಾಸವಿದೆ” ಎಂದು ಹೇಳಿದರು.

ತಮಿಳುನಾಡಿನ ಹಲವು ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನು ದತ್ತು ಪಡೆಯುವ ಯೋಜನೆಯಿದೆ. ಅವುಗಳನ್ನು ವಿಶ್ವದಲ್ಲೇ ಅತ್ಯುತ್ತಮ ಗ್ರಾಮಗಳನ್ನಾಗಿಸುವ ಉದ್ದೇಶವಿದೆ” ಎಂದು ಹೇಳಿದರು.

Leave a Reply

Your email address will not be published.