ರಾಜ್ಯದ 11 ಮಹಾನಗರ ಪಾಲಿಕೆಗಳಿಗೆ ಹಾಟ್ ಸ್ಪಾಟ್ ವ್ಯವಸ್ಥೆ: ಸಚಿವ ಪ್ರಿಯಾಕ್ ಖರ್ಗೆ

ಸಚಿವ ಪ್ರಿಯಾಕ್ ಖರ್ಗೆ

ಕಲಬುರಗಿ: ಮುಂಬರುವ ದಿನಗಳಲ್ಲಿ ರಾಜ್ಯದ 11 ಮಹಾನಗರ ಪಾಲಿಕೆಗಳಿಗೆ ಹಾಟ್ ಸ್ಪಾಟ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಐಟಿಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಕ್ ಖರ್ಗೆ ತಿಳಿಸಿದರು.

ಏಪ್ರಿಲ್ ಅಂತ್ಯದವರೆಗೆ ರಾಜ್ಯಾದ್ಯಂತ 11 ಸಾವಿರ ಕಡೆ, ಬೆಂಗಳೂರು ನಲ್ಲಿ 5,000 ಕಡೆ ವೈಫೈ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಬುಧವಾರ ಸುದ್ದಿಗಾರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.

ಕಲಬುರಗಿ ಮಹಾನಗರ ಪಾಲಿಕೆ ಅಡಿಯಲ್ಲಿ 30 ಕಡೆ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಮೊದಲು  ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ೨೫೦೦ ಗ್ರಾಪಂಗಳ ಪೈಕಿ 1000 ಗ್ರಾಪಂ ಗಳಲ್ಲಿ ಸೈಬರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಉಳಿದವುಗಳಿಗೆ ಆದ್ಯತೆ ಮೇರೆಗೆ ಈ ವ್ಯವಸ್ಥೆ ಸಲ್ಲಿಸಲಾಗುವುದು ಎಂದರು.

Leave a Reply

Your email address will not be published.