ಮಹಾನ್ ಪುರುಷರನ್ನು ಸಮುದಾಯಕ್ಕೆ ಸೀಮೀತಗೊಳಿಸಬೇಡಿ: ಬಾಲಚಂದ್ರ ಜಾರಕಿಹೊಳಿ

ಮೂಡಲಗಿ ಪಟ್ಟಣದ ಈರಣ್ಣಾ ನಗರದಲ್ಲಿರುವ ಹಡಪದ ಅಪ್ಪಣ್ಣಾ ದೇವಸ್ಥಾನದಲ್ಲಿ ಶಿವಶರಣ ಹಡಪದ ಅಪ್ಪಣ್ಣಾ ಸಮಗ್ರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ದೇವಸ್ಥಾನದ 5ನೇ ವರ್ಷದ “ಶರಣ ಸಂಸ್ಕøತಿ ಉತ್ಸವ” ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಾಲ್ಗೊಂಡು ಮಾತನಾಡುತ್ತಿರುವುದು.

ಮೂಡಲಗಿ: ಮಹಾಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಜಾತ್ಯಾತೀತ ತಳಹದಿಗೆ ಶ್ರಮಿಸಿದ ಮಹಾನ್ ಪುರುಷರನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮೀತಗೊಳಿಸಬೇಡಿ ಎಂದು ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮಂಗಳವಾರದಂದು ಪಟ್ಟಣದ ಈರಣ್ಣಾ ನಗರದಲ್ಲಿರುವ ಹಡಪದ ಅಪ್ಪಣ್ಣಾ ದೇವಸ್ಥಾನದಲ್ಲಿ ಶಿವಶರಣ ಹಡಪದ ಅಪ್ಪಣ್ಣಾ ಸಮಗ್ರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ದೇವಸ್ಥಾನದ 5ನೇ ವರ್ಷದ “ಶರಣ ಸಂಸ್ಕøತಿ ಉತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಹಡಪದ ಅಪ್ಪಣ್ಣಾ ಅವರನ್ನೂ ಸಹ ಒಂದೇ ಜಾತಿಗೆ ಸೀಮೀತ ಮಾಡಬೇಡಿ. ಎಂದರು.

12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಸಾರಿದ ಸಾಮಾಜಿಕ ನ್ಯಾಯದ ತತ್ವದಲ್ಲಿ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ಹಿತಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಎಲ್ಲ ಪಂಗಡಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಲಾಗುತ್ತಿದೆ. ಸರ್ವರ ಹಿತವೇ ತಮ್ಮ ಧ್ಯೇಯವಾಗಿದ್ದು, ಕಳೆದ 14 ವರ್ಷಗಳಿಂದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಹಡಪದ ಅಪ್ಪಣ್ಣಾ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.

ಸಮಾಜದ ಏಳ್ಗೆಗೆ ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಶ್ರಮಿಸಬೇಕು. ವ್ಯಕ್ತಿಗಿಂತ ಸಮಾಜ ದೊಡ್ಡದಿದ್ದು, ಸಮಾಜವನ್ನು ವ್ಯವಸ್ಥಿತವಾಗಿ ಸಂಘಟಿಸಿ ಒಗ್ಗೂಡಿದರೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ತಮ್ಮಲ್ಲಿಯ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಸಮಾಜದ ಪರಿವರ್ತಣೆಗಾಗಿ ದುಡಿಯಬೇಕು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಸಮಾಜವನ್ನು ಮುಖ್ಯವಾಹಿಣಿಗೆ ತರುವಂತೆ ಬಾಂಧವರಲ್ಲಿ ಕೋರಿದರು. ಸಮಾಜ ಬಾಂಧವರು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಸಾನಿಧ್ಯವನ್ನು ಹುಣಶ್ಯಾಳ ಪಿ.ಜಿ. ನಿಜಗುಣ ದೇವರು, ಸುಣಧೋಳಿಯ ಶಿವಾನಂದ ಸ್ವಾಮಿಗಳು, ಕಂಕಣವಾಡಿ, ಬೆಂಡವಾಡ ಹಾಗೂ ಶರಣರು ವಹಿಸಿದ್ದರು.

ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ.ಢವಳೇಶ್ವರ, ಪುರಸಭೆ ಉಪಾಧ್ಯಕ್ಷ ರವಿ ಸೋನವಾಲ್ಕರ, ಗಣ್ಯರಾದ ವೀರಣ್ಣಾ ಹೊಸೂರ, ಎನ್.ಟಿ.ಫಿರೋಜಿ, ಅಶೋಕ ನಾಯಿಕ, ಸಂತೋಷ ಸೋನವಾಲ್ಕರ, ಈರಣ್ಣಾ ಬನ್ನೂರ, ಹನಮಂರ ತೇರದಾಳ, ಪ್ರಕಾಶ ಮಾದರ, ಶಿವಬಸು ಸುಣಧೋಳಿ, ಸಿದ್ಧಲಿಂಗ ಯರಗಟ್ಟಿ, ಲಕ್ಷ್ಮಣ ನಾಂವಿ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.

Leave a Reply

Your email address will not be published.