ಬೆಳಗಾವಿಯ ನೂತನ ಹೆಲಿಪ್ಯಾಡ್ ಗೆ ಆಗಮಿಸಿದ ಶಾಸಕ ಸತೀಶ ಜಾರಕಿಹೊಳಿ: ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

 


ಬೆಳಗಾವಿ:  ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಅವರು ಇಲ್ಲಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಲಾದ ಹೆಲಿಪ್ಯಾಡ್ ಗೆ ಮೊದಲ ಬಾರಿಗೆ ಆಗಮಿಸಿದ್ದು, ಅವರನ್ನು ಅಭಿಮಾನಿಗಳು ಹೂಗುಚ್ಚ ನೀಡಿ ಅತ್ಯಂತ ಹರ್ಷದಿಂದ ಬರಮಾಡಿಕೊಂಡರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಾಶೀರ್ವಾದ ಸಮಾವೇಶದಲ್ಲಿ ಭಾಗಿಯಾಗಿ ಲಿಂಗಸಗೂರುನಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಬೆಳಗಾವಿಯ ಕುಮಾರಸ್ವಾಮಿ ನಗರದಲ್ಲಿ ನೂತವಾಗಿ ನಿರ್ಮಿಸಿದ ಹೆಲಿಪ್ಯಾಡ್ ಗೆ ಬಂದಿಳಿದರು.

ಈ ಸಂಧರ್ಭದಲ್ಲಿ ಶಾಸಕರ ಆಪ್ತ ಸಹಾಯಕ ವ್ಹಿ.ಡಿ. ನಾಯ್ಕರ್, ಮಹೇಶ ಕಡಪಟ್ಟಿ, ವಿಜಯ ತಳವಾರ, ಡಾ. ಮಂಜುನಾಥ, ರಾಜಣ್ಣ, ಕಿರಣ ಸಿಂಗ್ ರಜಪೂತ, ಪಾಂಡು ಮಣ್ಣಿಕೇರಿ ಅನೀಲ ಪಾವಸೆ, ಸುಭಾಶ ಹೊನಮನಿ, ಮಲಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

ನಂತರ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರು ರಸ್ತೆ ಮಾರ್ಗವಾಗಿ ಜಾಪರ್ ವಾಡಿ ಮತ್ತು ಕಡೋಲಿ ಗ್ರಾಮಗಳಲ್ಲಿ ನಡೆಯಲಿರುವ  ಕಾರ್ಯಕ್ರಮಗಳಲ್ಲಿ  ಭಾಗಿಯಾಗಲು ತೆರಳಿದರು.

Leave a Reply

Your email address will not be published.