ಮಿರ್ಚಿ ಪಕೋಡ ತಿಂದ ರಾಹುಲ್ ಗಾಂಧಿ: ಪ್ರಧಾನಿ ಮೋದಿಗೆ ಟಾಂಗ್


ರಾಯಚೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ವಿನೂತನ ರೀತಿಯಲ್ಲಿ ಪ್ರಧಾನಿ ಮೋದಿಗೆ    ಟಾಂಗ್ ನೀಡಿದ್ದಾರೆ.

ರಾಯಚೂರಿನ ದೇವದುರ್ಗದಲ್ಲಿ ನಡೆದ ಬುಡಕಟ್ಟು ಜನಾಂಗದ ಸಮಾವೇಶ ಮುಕ್ತಾಯ ನಂತರ ಸಮೀಪದ ಕಲ್ಮಲಾದಲ್ಲಿ ರೋಡ ಶೋ ವೇಳೆ ರಸ್ತೆ ಬದಿಯ ಗುಡಂಗಡಿಯಲ್ಲಿ  ಮಿರ್ಚಿ ಪಕೋಡಾ (ಭಜ್ಜಿ) ಸೇವಿಸುವ ಮೂಲಕ ಪ್ರಧನಿ ಮೋದಿಗೆ ರಾಹುಲ ಗಾಂಧಿ ಟಾಂಗ್ ನೀಡಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ,  ಪರಮೇಶ್ವರ್‌,  ಸಚಿವರು, ಶಾಸಕರಿಗೆ, ಕಾಂಗ್ರೆಸ್ ಮುಖಂಡರಿಗೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ಪ್ರೀತಿಯಿಂದ ಪಕೋಡ ಹಂಚಿದ ರಾಹುಲ ಮಂಡಕ್ಕಿ ಖಡಕ್ ಚಹಾವನ್ನು ಸೇವಿಸಿದರು. 

ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಜನಾರ್ಶೀವಾದ ಯಾತ್ರೆಯಲ್ಲಿ ರಾಹುಲ ಗಾಂಧಿ ಪಾಲ್ಗೊಂಡಿದ್ದು ಪ್ರಧಾನಿ ಮೋದಿ ವಿರುದ್ಧ ತೀವ್ರ್ ವಾಗ್ದಾಳಿ ನಡೆಸಿದ್ದಾರೆ. 

ಪಕೋಡ ತಿಂದ ನಂತರ ಅಲ್ಲೇ ಟೀ ಕುಡಿದು ಹೋಟೆಲ್‌ ಮಾಲಿಕ ಹಾಗೂ ಮಹಿಳಾ ವ್ಯಾಪಾರಿಗಳ ಜೊತೆ ವರಾಹುಲ್‌ ಗಾಂಧಿ ಚರ್ಚೆ ನಡೆಸಿದರು

Leave a Reply

Your email address will not be published.