ಭಾರತೀಯ ಸೇನೆ, ಹುತಾತ್ಮರನ್ನು ಹಿಯಾಳಿಸಿದ ನಿಮಗೆ ನಾಚಿಗೆ ಬರಬೇಕು: ಆರ್ ಎಸ್ ಎಸ್ ಮುಖ್ಯಸ್ಥ ಭಾಗವತ್ ವಿರುದ್ಧ ರಾಹುಲ ಗಾಂಧಿ ವಾಗ್ದಾಳಿ


ಹೊಸದಿಲ್ಲಿ:ಭಾರತೀಯ ಸೇನೆಯ ಕುರಿತು ಅಗೌರವದ ಹೇಳಿಕೆ ನೀಡಿರುವ   ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಕ್ಕಾಗಿ ಹುತಾತ್ಮರಾದವರಿಗೆ  ಅಗೌರವ ತೋರಿದ ಆರ್ ಎಸ್ ಎಸ್ ಮುಖ್ಯಸ್ಥ ಭಾಗವತ್ ಹೇಳಿಕೆ ಪ್ರತಿ ಭಾರತೀಯನಿಗೆ ಅವಮಾನ,  ದೇಶದ ಧ್ವಜಕ್ಕೆ ಸೆಲ್ಯುಟ್  ಮಾಡಿದ ಪ್ರತಿ ಯೋಧನಿಗೂ ಅವಮಾನವಾಗಿದೆ. ಹುತಾತ್ಮರನ್ನು ಮತ್ತು ಸೇನೆಯನ್ನು ಹಿಯಾಳಿಸಿದ ನಿಮಗೆ ನಾಚಿಕೆ ಬರಬೇಕು ಎಂದು ಟ್ವಿಟ್ಟರ್ ಮೂಲಕ ರಾಹುಲ ಗಾಂಧಿ ಆಕ್ರೋಶ  ಹೊರಹಾಕಿದ್ದಾರೆ.

ಸೇನೆ ಮತ್ತು ಹುತಾತ್ಮಾರ ಕುರಿತು ಅಗೌರವ ತೋರಿದ ಸಂಘ ಪರಿವಾರ ಶೀಘ್ರ ಕ್ಷಮೇ ಕೇಳಬೇಕೆಂದು ರಾಹುಲ ಒತ್ತಾಯಿಸಿದ್ದಾರೆ. 

ಬಿಹಾರದ ಮುಝಫ್ಫರ್ ಪುರದಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, “3 ದಿನಗಳಲ್ಲಿ ಆರೆಸ್ಸೆಸ್ ಸೇನೆಯನ್ನು ರಚಿಸಲಿದೆ. ಇದನ್ನು ರಚಿಸಲು ಭಾರತೀಯ ಸೇನೆಗೆ 6ರಿಂದ 7 ತಿಂಗಳು ಬೇಕಾದೀತು. ಇದು ನಮ್ಮ ಸಾಮರ್ಥ್ಯ. ದೇಶಕ್ಕೆ ಅಂತಹ ಸ್ಥಿತಿ ಎದುರಾದರೆ ಹಾಗು ಸಂವಿಧಾನದಲ್ಲಿ ಅವಕಾಶವಿದ್ದರೆ ಸ್ವಯಂಸೇವಕರು ಎಲ್ಲರಿಗಿಂತ ಮುಂದಿರಲಿದ್ದಾರೆ” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆ ಕುರಿತು  ಆಕ್ರೋಶ ವ್ಯಕ್ತಪಡಿಸಿರುವ ಹಲವರು  ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು  ಭಾರತೀಯ ಸೇನೆಯ ಸಾಮರ್ಥ್ಯವನ್ನು ಶಂಕಿಸಿದ್ದಾರೆ.  ಮತ್ತು  ಹುತಾತ್ಮ ಯೋಧರಿಗೆ ಅಗೌರವ ತೋರಿಸಿದ್ದಾರೆ ಎಂದು ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.