ಹಟ್ಟಿಚಿನ್ನದಗಣಿ: ದುಷ್ಕರ್ಮಿಗಳಿಂದ ಶಾಲಾ ಗಾಜಿನ ಕಿಟಕಿಗಳು ಧ್ವಂಸ


ಹಟ್ಟಿ ಚಿನ್ನದಗಣಿ: ಇಲ್ಲಿನ ಶ್ರೀ ವಿನಾಯಕ ವಿಧ್ಯಾ ಸಂಸ್ಥೆಯ ನೂತನ ಕಟ್ಟಡಗಳ ಗಾಜಿನ ಕಿಟಕಿಗಳನ್ನು ಯಾರೋ ದುಷ್ಕರ್ಮಿಗಳು ಧ್ವಂಸಗೋಳಿಸಿದ್ದಾರೆ.

ಸೋಮವಾರ ರಾತ್ರಿ ಯಾರೋ ಕಿಡಿಗೇಡಿಗಳಿಂದ ಶ್ರೀ ವಿನಾಯಕ ವಿಧ್ಯಾಸಂಸ್ಥೆಯ ಹೊಸ ಕಟ್ಟಡಗಳು ನಿರ್ಮಾಣವಾಗಿದ್ದು ಅದರ ಕಿಟಕಿಗಳನ್ನು ಗಾಜಿನಿಂದ ನಿರ್ಮಿಸಲಾಗಿದ್ದು ದುಷ್ಕರ್ಮಿಗಳಿಂದ ಸಂಪೂರ್ಣ ಹೊಡೆದು ಹಾಳಾಗಿರುತ್ತವೆ. ಇದರಿಂದ ಸಂಸ್ಥೆಗೆ ಸುಮಾರು 1 ಲಕ್ಷ ದಷ್ಟು ಹಾನಿಯಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರುಗಳಾದ ನರಸಪ್ಪ ಯಾದವ್ ತಿಳಿಸಿದ್ದಾರೆ.

ಹಟ್ಟಿ ಪೋಲಿಸ್ ಠಾಣೆಯ ಪಿ.ಎಸ್.ಐ. ಕುಮಾರಿ ಶೈಲಾ ಪ್ಯಾಟಿ ಶಟಲ್ ಸ್ಥಳಕ್ಕೆ ಬೇಟಿನೀಡಿ ಪರಿಶೀಲಿಸಿ ಪ್ರಕಟಣೆಯನ್ನು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published.