ಅನೈತಿಕ ಚಟುವಟಿಕೆ, ಬಿಡಾಡಿ ದನಗಳ ತಾಣವಾದ ಶಹಾಪುರ ತರಕಾರಿ ಮಾರುಕಟ್ಟೆ…!


ಶಹಾಪೂರ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ಶಹಾಪುರದ ಹೃದಯ ಭಾಗದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಿದೆ. ಆದರೆ ತರಕಾರಿ ವ್ಯಾಪಾರಿಗಳು ಅದನ್ನು ಸದುಪಯೋಗ ಪಡಿಸಿಕೊಳ್ಳದೆ ಹಾಳುಗೆಡವಿದ್ದು,ಮಾರುಕಟ್ಟೆ ಈಗ ಬಿಡಾಡಿ ದನಗಳ ಪಾಲಾಗಿದೆ.

ಮಾರುಕಟ್ಟೆಯಲ್ಲಿ ಹಂದಿಗಳು ಮತ್ತು ಬಿಡಾಡಿ ದನಗಳ ವಾಸಿಸುತ್ತಿವೆ.ಅಲ್ಲದೇ  ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿ ಆಗುತ್ತಿದ್ದಂತೆ ಕುಡುಕರಿಗೆ ಬಾರ್ ಆಗಿದೆ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆಮಾಡಿ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾರ್ವಜನಿಕರು ರೋಗ ರುಜಿಗಳಿಗೆ ತುತ್ತಾಗುವ ಭಯದ ಭೀತಿಯಲ್ಲಿ ಬದುಕುತ್ತಿದ್ದಾರೆ.

ಮಾರುಕಟ್ಟೆ ನಿರ್ಮಾಣ ಮಾಡಿದರು ರಸ್ತೆಯ ಮೇಲೆ ತರಕಾರಿ ಮಾರುತ್ತಿದ್ದಾರೆ. ಕೂಡಲೇ  ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕು. ಇಲ್ಲದಿದ್ದರೆ ಉಗ್ರ  ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ದಲಿತ ಸೇನೆಯ ಅದ್ಯಕ್ಷ ಅಶೋಕ ಹೊಸ್ಮನಿ ಗೋಗಿ ಒತ್ತಾಯಿಸಿದ್ದಾರೆ.

Leave a Reply

Your email address will not be published.