ದಲಿತರ ಏಳಿಗೆಗಾಗಿ ಸಂಘಟನೆ ಅವಶ್ಯಕ: ಶರಣುರೆಡ್ಡಿ


ಶಹಾಪುರ: ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅಭಿವೃದ್ಧಿ ಹೊಂದಬೇಕಾದರೆ ಇಂದು ಸಂಘಟನೆಗಳು ಅವಶ್ಯಕವಾಗಿ ಬೇಕಾಗುತ್ತದೆ. ಎಂದು ಶಹಾಪುರ ತಾಲ್ಲೂಕು ದಲಿತ ಸೇನೆಯ ಅಧ್ಯಕ್ಷ ಶರಣುರೆಡ್ಡಿ ಹತ್ತಿಗೂಡೂರ ಹೇಳಿದರು.

ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಜರುಗಿದ ದಲಿತ ಸೇನೆಯ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇವೆ ಬುದ್ದ ,ಬಸವ ,ಅಂಬೇಡ್ಕರ್, ಅವರ ಆಶಯಗಳು ವಿರುದ್ಧ ಮೇಲ್ಜಾತಿಯವರು ನಡೆದುಕೊಳ್ಳುತ್ತಿರುವದು ತುಂಬಾ ಬೇಸರು ತರುವಂತದ್ದು ಎಂದು ದಲಿತ ಸೇನೆಯ ಗ್ರಾಮ ಘಟಕದ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಕೂಗಿ ತಮ್ಮ ನೋವನ್ನು ಹೊರಗೆಡವಿದರು.

ಈ ಸಂಧರ್ಭದಲ್ಲಿ ಅಧ್ಯಕ್ಷರಾಗಿ ಅಶೋಕ,ಉಪಾಧ್ಯಕ್ಷರಾಗಿ ಚಂದ್ರು ಟಣಕೇದಾರ,ಹುಸನಪ್ಪ ಬಲಭೀಮ,ಸಂಘಟನಾ ಕಾರ್ಯದರ್ಶಿಗಳು,ಅಂಬ್ಲಪ್ಪ,ಮರೆಪ್ಪ,ಅಮಾತೆಪ್ಪ,ಹೊನ್ನರಾಜ ಗೌರವ ಸಲಹೆಗಾರರಾಗಿ ನೇಮಿಸಲಾಗಿದೆ.

Leave a Reply

Your email address will not be published.