ಪಕೋಡಾ ಮಾರಿ ಪ್ರಧಾನಿ ಮೋದಿ ವಿರುದ್ದ ವಿದ್ಯಾರ್ಥಿಗಳ ಆಕ್ರೋಶ


ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾವಂತ ಪದವೀಧರರನ್ನು ಪಕೋಡ ಮಾರಾಟ ಮಾಡುವವರಿಗೆ ಹೋಲಿಕೆ ಮಾಡಿದ್ದಾರೆ ಎಂದು ಆರೋಪಿಸಿ ಎನ್ಎಸ್ ಯುಐ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು ಇಲ್ಲಿನ ಕೆಸಿಡಿ ಮೈದಾನದಲ್ಲಿ ಶುಕ್ರವಾರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಮೋದಿ ಹೇಳಿಕೆ ಖಂಡಿಸಿ  ವಿದ್ಯಾರ್ಥಿಗಳು  ಕೆಸಿಡಿ ವೃತ್ತದಲ್ಲಿ ಪಕೋಡ ತಯಾರಿಸಿ ಮಾರಾಟ ಮಾಡುವ ಮೂಲಕ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್ಸಿ ಪಕೋಡಾ, ಬಿಎ ಪಕೋಡಾ, ಮೋದಿ ಪಕೋಡಾ, ಅಮಿತ್ ಶಾ ಪಕೋಡಾ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಮೋದಿ ಹೇಳಿದ್ದರು. ಆದರೆ, ಆ ಹೇಳಿಕೆಗೆ ಅವರು ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈಗ ನಾವು ಮಾಡುವ ಪಕೋಡವನ್ನು ಮೋದಿ ಸೇವಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾವಂತ ಪದವೀಧರರಿಗೆ ಉದ್ಯೋಗ ಸಿಗುವವರೆಗೂ ಗೌರವಧನವನ್ನು ನೀಡಬೇಕು ಮತ್ತು ಅರ್ಹತೆಗೆ ಅನುಗುಣವಾಗಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

 

Leave a Reply

Your email address will not be published.