ಸುರಪುರ: ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಾಗರತ್ನ ಆಗಮನ

ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಾಗರತ್ನಾ ಓಲೇಕಾರ

ತಾಲೂಕಿನ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸುವೆ : ಓಲೇಕಾರ

ಸುರಪುರ: ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ನಾಗರತ್ನಾ ಓಲೇಕಾರ ಅವರು ಮಾತನಾಡಿ ತಾಲ್ಲೂಕಿನ ಹಿಂದಿನ ಶಿಕ್ಷಣ ಗುಣಮಟ್ಟ ತೃಪ್ತಿಕರವಾಗಿದೆ ಇನ್ನೂ ಗುಣಮಟ್ಟವನ್ನು ಉನ್ನತಸ್ಥಾಯಿಗೆ ತರಲು ಪ್ರಯತ್ನಿಸುತ್ತೆನೆ ಎಂದರು.

ತಾಲೂಕಿನ ಎಲ್ಲಾ ಮುಖ್ಯಗುರುಗಳ ಸಭೆ ಕರೆದು ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಅತ್ಯತ್ತಮ ಪಡಿಸಲು ಶ್ರಮಿಸುತ್ತೇನೆ ಹಾಗೂ ಶಿಕ್ಷಕರು ತಮಗೆ ಯಾವೂದೆ ಸಮಸ್ಯೆ ಎದುರಾದಲ್ಲಿ ಮುಕ್ತಾವಗಿ ಚರ್ಚಿಸಿ ಸಮಸ್ಯೆಯನ್ನು ಭಗಹರಿಸುವ ಕೆಲಸಮಾಡುತ್ತೇನೆ ಎಂದರು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಯಲ್ಲಪ್ಪ ಕಾಡ್ಲೂರು, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಳ್ಳೆಪ್ಪ ಕಾಜಾಂಜಿ, ಸಂಘದ ತಾಲೂಕ ಘಟಕದ ಅಧ್ಯಕ್ಷ ಸೋಮರೆಡ್ಡ ಮಂಗಿಹಾಳ, ಶಿಕ್ಷಕರಾದ ರಾಮಗೂಂಡಪ್ಪ, ಅನಂತಮೂರ್ತಿ ಡಬಿರ, ಸಂಗಮ್ಮ ನಾಗಾವಿ, ಭೀಮಣ್ಣ, ಅಬ್ದುಲ್ ಪಟೇಲ್, ರಾಮಣ್ಣ ಪೂಜಾರಿ, ಮಹದೇವಪ್ಪ ಗುತ್ತೇದಾರ, ಖಾದರಪಟೇಲ್, ಸಾಯೊಬಣ್ಣ ಪೂರ್ಲೆ,ಜಾಕೀರ ಹುಸೇನ್, ಮೌನೇಶ, ಶಾಂತಪ್ಪ ಸಿಬ್ಬಂದಿಗಳಾದ ಕೋಪ್ರೇಶ ಹಳಿಜೋಳ, ಜಗದೀಶ ಬೇಲಿ, ಚಿದಾನಂದ, ಚನ್ನಯ್ಯ ಹಿರೇಮಠ, ಗೌರಮ್ಮ, ಹಣಮಂತ್ರಾಯ, ಅಮರೇಶ ಗುಡುಗುಂಟಿ, ಯಂಕಪ್ಪ, ಮಾನಪ್ಪ ಇನ್ನಿತರರಿದ್ದರು.

Leave a Reply

Your email address will not be published.