ರಾಯಬಾಗ: ಕಳ್ಳಬಟ್ಟಿ ಸರಾಯಿ ಅಡ್ಡೆ ಮೇಲೆ ದಾಳಿ 1300 ಲೀಟರ್ ಕಳ್ಳಬಟ್ಟಿ ವಶ…!


ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೋರಬ ಗ್ರಾಮದ ಹೊರವಲಯದಲ್ಲಿ ಕಳ್ಳಬಟ್ಟಿ ಕಾಯಿಸುತ್ತಿದ್ದ ಮೂರು ಅಡ್ಡೆಗಳ ಮೇಲೆ ಏಕಕಾಲಕ್ಕೆ  ಬೆಳಗಾವಿ ಡಿಸಿಬಿ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ 1300 ಲೀಟರ್ ಕೂ ಹೆಚ್ಚು ಕಳ್ಳಬಟ್ಟಿ ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಡಿಸಿ ಬಿ ಪೊಲೀಸರು ಖಚಿತ ಮಾಹಿತಿ ಮೆರಿಗೆ ಹಟಾತ್ತನೆ ದಾಳಿ ನಡೆಸಿದಾಗ ಕಳ್ಳಬಟ್ಟಿಯಲ್ಲಿ ತೊಡಗಿದ್ದ ಬಾಲಚಂದ್ರ ಅಸುದೆ, ಶರ್ಮಿಲಾ ಅಸುದೆ, ಕಲ್ಪನಾ ಅಸುದೆ ಸ್ಥಳದಿಂದ ಪರಾರಿಯಾಗಿದ್ದಾರೆ .

ಸರಾಯಿ ತಯ್ಯಾರ ಮಾಡುವ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದು , ಈ ಬಗ್ಗೆ ಕುಡಚಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published.