ಯಮಕನಮರಡಿ: ಜಾಪರವಾಡಿಯಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಸತೀಶ ಜಾರಕಿಹೊಳಿ ಚಾಲನೆ


ಯಮಕನಮರಡಿ: ಯಮಕನಮರಡಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಜಾಪರವಾಡಿ  ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಎಐಸಿಸಿ ಕಾರ್ಯದರ್ಶಿ ಶಾಸಕ ಸತೀಶ ಜಾರಕಿಹೊಳಿ ಅವರು  ಸೋಮವಾರ ಸಂಜೆ ಚಾಲನೆ  ನೀಡಿದರು.

ಜಾಪರವಾಡಿ ಗ್ರಾಮದಿಂದ ಗೌಂಡವಾಡ ಗ್ರಾಮದವರೆಗೆ ನಬಾರ್ಡ ಯೋಜನೆಯಡಿಯಲ್ಲಿ  28 ಲಕ್ಷ ರೂ. ವೆಚ್ಚದಲ್ಲಿ ಒಂದು ಕಿ,ಮೀ ರಸ್ತೆ ಕಾಮಗಾರಿಗೆ ಶಾಸಕ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಗ್ರಾ.ಪಂ ಅಧ್ಯಕ್ಷ ರಾಜು ಮಾಯಣ್ಣ, ಆನಂದ ಪಾಟೀಲ್, ಕಲ್ಲಪ್ಪ ಮುತ್ತಗೇಕರ್, ಟಿ.ಎಫ್. ಪಾಟೀಲ್, ಗಜಾನನ ಕಾಗನೇಕರ್ ಇತರರು ಇದ್ದರು.

Leave a Reply

Your email address will not be published.