ಮೊಹಮ್ಮದ್ ಶಮಿಗೆ ಬಿಸಿಸಿಐ ಕ್ಲೀನ್ ಚಿಟ್


ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಬಿಗ್ ರಿಲೀಫ್ ದೊರೆತಿದ್ದು, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ತಂಡದಿಂದ ಕ್ಲೀನ್ ಚಿಟ್ ಹೊರೆತಿದೆ.

ಕಳೆದ ಕೆಲವು ದಿನಗಳಿಂದ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಮಧ್ಯೆ ಜಗಳ ನಡೆದು ತಾರಕಕ್ಕೇರಿ ಹಸೀನ್, ಶಮಿ ವಿರುದ್ದ ಅನೇಕ ಆರೋಪಗಳನ್ನು ಮಾಡಿದರಲ್ಲದೇ ಬುಕ್ಕಿ ಮೊಹಮ್ಮದ್ ಭಾಯ್ ಎಂಬುವವರಿಗೆ ಶಮಿ ಗಿಫ್ಟರ್ ಪಡದು  ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ತಂಡ, ಶಮಿ ಯಾವುದೇ ಮ್ಯಾಚ್ ಫಿಕ್ಸಿಂಗ್​​​ನಲ್ಲಿ ಭಾಗಿಯಾಗಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ.

ಶಮಿ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರಿಸಿದ್ದರಿಂದ ಅವರ ಬಿಸಿಸಿಐ ವಾರ್ಷಿಕ ಗುತ್ತಿಗೆಯನ್ನ ಕಾಯ್ದಿರಿಸಲಾಗಿತ್ತು. ಇದೀಗ ಆರೋಪ ಸುಳ್ಳಾಗಿದ್ದರಿಂದ ಮೊಹಮ್ಮದ್ ಶಮಿಗೆ ಬಿ ಗ್ರೇಡ್ ವೇತನ ಅಂದರೆ 3 ಕೋಟಿ ರೂಪಾಯಿಗಳನ್ನ ನೀಡಲು ಬಿಸಿಸಿಐ ನಿರ್ಧರಿಸಿದೆ.

ಬಿಸಿಸಿಐ ಕ್ಲೀನ್​ಚಿಟ್​ ನೀಡಿರುವುದರಿಂದ ಮೊಹಮ್ಮದ್ ಶಮಿ ಐಪಿಎಲ್​ನಲ್ಲಿ ಡೆಲ್ಲಿ ಡೇರ್​ಡೆವಿಲ್ಸ್​ ತಂಡದಲ್ಲಿ ಆಡುವ ಅವಕಾಶಕ್ಕೂ ಕೂಡ ಯಾವುದೇ ಅಡೆತಡೆಯಿಲ್ಲ.

(Source– firstnews)

Leave a Reply

Your email address will not be published.