“102 ನಾಟ್ ಔಟ್ ‘ ಚಿತ್ರದ ಪೋಸ್ಟರ್ ಶೇರ್ ಮಾಡಿದ ಬಿಗ್ ಬಿ !

 

 


ಹೊಸದಿಲ್ಲಿ:  ಬಹುನಿರೀಕ್ಷಿತ, ಮಹತ್ವಾಕಾಂಕ್ಷೆಯ ಚಿತ್ರ ” 102 ನಾಟ್ ಔಟ್ ‘ ಮೊದಲ ಪೋಸ್ಟರ್ ನ್ನು ಅಪ್ಪನ -ಪಾತ್ರದಲ್ಲಿರುವ ಬಿಗ್ ಬಿ ಅಮಿತಾಭ್  ಶೇರ್ ಮಾಡಿಕೊಂಡಿದ್ದಾರೆ.

ಎಗ್  ಶೆಲ್ ನಿಂದ ಹೊರಬರುತ್ತಿರುವ ಚಾಂದನಿ ಸ್ಟಾರ್ ನನ್ನು ನೋಡಿ ತಾವು ನಸುನಗುತ್ತಿರುವ  ಈ ಪೋಸ್ಟರ್ ನ್ನು ಅಮಿತಾಬ್ ಟ್ವೀಟರ್ ಖಾತೆಯಲ್ಲಿ ಹಾಕಿದ್ದಾರೆ.

” ಬಾಪ್ ಕೂಲ್, ಬೇಟಾ ಓಲ್ಡ್ ಸ್ಕೂಲ್ ‘ ಎಂಬ  ಒಕ್ಕಣಿಕೆ ಇರುವ 102 ನಾಟ್ ಔಟ್ ಚಿತ್ರದ  ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.  ವಿಭಿನ್ನ ಮನೋಭಾವನೆಯ   ಅಪ್ಪ-ಮಗನ ಪ್ರೇಮ ಕುರಿತಾದ ಚಿತ್ರ  ಇದಾಗಿದ್ದು, ಬಿಗ್ ಬಿ 102 ವರ್ಷದ  ಅಪ್ಪನಾಗಿ  ಕಾಣಿಸಿಕೊಂಡಿದ್ದರೆ ಅವರ 75 ವರ್ಷದ ಪುತ್ರನಾಗಿ ರಿಷಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ.

ಬರೋಬ್ಬರಿ 27 ವರ್ಷಗಳ ನಂತರ  ಈ ಜೋಡಿ ಜತೆಯಾಗಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಗುಜರಾತಿ ಭಾಷೆಯಲ್ಲಿ ಇದೇ ಹೆಸರಿನಲ್ಲಿ ಯಶಸ್ವಿ  ನಾಟಕ ಬರೆದಿರುವ  ಸೌಮ್ಯ ಜೋಶಿ ಅವರೇ ಈ ಚಿತ್ರಕತೆಯನ್ನೂ ಬರೆದಿದ್ದಾರೆ.

ಉಮೇಶ ಶುಕ್ಲಾ ನಿರ್ದೇಶನದ  ಈ ಚಿತ್ರ ಮೇ 4 ರಂದು ತೆರೆ ಕಾಣಲಿದೆ.

Leave a Reply

Your email address will not be published.