ಹಿರೋಡೆ ಕೆರೆಯಲ್ಲಿ ವ್ಯಕ್ತಿಯ ಶವ ಪತ್ತೆ


ಪಾಂಡವಪುರ : ಪಟ್ಟಣದ ಹಿರೋಡೆ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸುಮಾರು 40-45 ವರ್ಷ ವಯಸ್ಸಿನ ಈ ವ್ಯಕ್ತಿಯ ಶವ ಸಂಪೂರ್ಣ ಕೊಳೆತು ಹೋಗಿ ಕೆರೆಯಲ್ಲಿ ತೇಲುತ್ತಿತ್ತು. ಮಾಸಲು ಬಣ್ಣದ ನಿಕ್ಕರ್, ನೀಲಿ ಲುಂಗಿ ಮತ್ತು ಬಿಳಿ ಶರ್ಟ್ ಧರಿಸಿದ್ದ ಈ ವ್ಯಕ್ತಿ ಬಹಿರ್ದಸೆಯ ನಂತರ ನೀರಿಗಿಳಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಸತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.