ಹರಳಹಳ್ಳಿಯಲ್ಲಿ ಪುಟ್ಟಣ್ಣಯ್ಯ ಸ್ಮರಣೆ, ನೂರಾರು ಸಸಿ ವಿತರಣೆ

ಪಾಂಡವಪುರ ತಾಲ್ಲೂಕು ಹರಳಹಳ್ಳಿ ಗ್ರಾಮದಲ್ಲಿ ನಡೆದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣಾರ್ಥ `ತಿಥಿ ಬಿಡಿ, ಸಸಿ ನೆಡಿ’ ಕಾರ್ಯಕ್ರಮವನ್ನು ಪಚ್ಚೆ ನಂಜುಂಡಸ್ವಾಮಿ ಉದ್ಘಾಟಿಸಿದರು.
ಪಾಂಡವಪುರ ತಾಲ್ಲೂಕು ಹರಳಹಳ್ಳಿ ಗ್ರಾಮದಲ್ಲಿ ನಡೆದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣಾರ್ಥ `ತಿಥಿ ಬಿಡಿ, ಸಸಿ ನೆಡಿ’ ಕಾರ್ಯಕ್ರಮದಲ್ಲಿ ಪುಟ್ಟಣ್ಣಯ್ಯ ಪುತ್ರಿ ಅಕ್ಷತಾ ಮಾತನಾಡಿದರು.
ಪಾಂಡವಪುರ ತಾಲ್ಲೂಕು ಹರಳಹಳ್ಳಿ ಗ್ರಾಮದಲ್ಲಿ ನಡೆದ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣಾರ್ಥ `ತಿಥಿ ಬಿಡಿ, ಸಸಿ ನೆಡಿ’ ಕಾರ್ಯಕ್ರಮದಲ್ಲಿ ಸಸಿ ವಿತರಣೆ ಮಾಡಲಾಯಿತು.

ಪಾಂಡವಪುರ: ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನೂರಾರು ರೈತರಿಗೆ ಸಸಿ ವಿತರಣೆ ಮಾಡಲಾಯಿತು.

`ತಿಥಿ ಬಿಡಿ, ಸಸಿ ನೆಡಿ’ ಧ್ವೇಯವಾಕ್ಯದೊಂದಿಗೆ ಹರಳಹಳ್ಳಿ ಗ್ರಾಮದ ಮುಖಂಡ ಮಹೇಶ್ ನೇತೃತ್ವದಲ್ಲಿ ನಡೆದ ಪುಟ್ಟಣ್ಣಯ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಹರಳಹಳ್ಳಿ ಗ್ರಾಮದ ನೂರಾರು ಜನ ಪುಟ್ಟಣ್ಣಯ್ಯ ಅಭಿಮಾನಿಗಳು ಭಾಗವಹಿಸಿ ಅಗಲಿದ ತಮ್ಮ ನಾಯಕ ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಶನಿವಾರ ಬೆಳಿಗ್ಗೆ ಸುಮಾರು 11.00 ಗಂಟೆಗೆ ನಡೆದ ಈ ಕಾರ್ಯಕ್ರಮವನ್ನು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯ ಪುತ್ರಿ ಅಕ್ಷತಾ ದೀಪ ಬೆಳಗಿಸಿ ಉದ್ಘಾಟಿಸಿದರು.

ಪುಟ್ಟಣ್ಣಯ್ಯ ಪುತ್ರಿ ಅಕ್ಷತಾ ಮಾತನಾಡಿ, ನಮ್ಮ ತಾತ ಶ್ರೀಕಂಠೇಗೌಡರದು ಅತ್ಯಂತ ಶ್ರೀಮಂತ ಮನೆತನ ನಮ್ಮ ಅಪ್ಪ ಹೋರಾಟಕ್ಕೆ ಇಳಿದ ಮೇಲೆ ನಮ್ಮ ಶ್ರೀಮಂತಿಕೆ ಎಲ್ಲಾ ಹೋಗಿ ನಾವೂ ಸಹಾ ಸಾಮಾನ್ಯರಾದೆವು, ನಮ್ಮಗಳ ಮದುವೆ ಆದ ನಂತರ ನಮ್ಮ ನಮ್ಮ ಸಂಸಾರ ಸಾಗಿಸಲು ನಾವು ಉದ್ಯೋಗ ಹುಡುಕಿಕೊಂಡು ಅಮೆರಿಕಾ ದೇಶಕ್ಕೆ ಹೋಗಿದ್ದೇವೆ, ನಮಗೆ ನಮ್ಮ ತಂದೆ ನಿಮ್ಮಗಳ ಪ್ರೀತಿಯನ್ನು ಬಿಟ್ಟು ಬೇರೇನೂ ಇಟ್ಟಿಲ್ಲ. ಇನ್ನು ಮುಂದೆ ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ, ನಮ್ಮ ತಂದೆಗೆ ನೀಡಿದ ಪ್ರೀತಿಯನ್ನು ನಮಗೂ ಕೊಡಿ ಎಂದು ಗದ್ಘಧಿತರಾಗಿ ನುಡಿದರು.

ನಾವು ನಮ್ಮ ತಂದೆಯೊಂದಿಗೆ ಅತ್ಯಂತ ಕಡಿಮೆ ಸಮಯವನ್ನು ಕಳೆದಿದ್ದರೂ ಅವರಿಂದ ಅಘಾದವಾದ ಪ್ರೀತಿಯನ್ನು ಪಡೆದಿದ್ದೇವೆ ಅವರು ಸತ್ತ ನಂತರ ಅವರ ಮೇಲೆ ನೀವಿಟ್ಟಿರುವ ಪ್ರೀತಿ ಎಂತಹದು ಎಂದು ನಮಗೆ ಗೊತ್ತಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ಪುಟ್ಟಣ್ಣಯ್ಯ ಒಬ್ಬ ಅಸಮಾನ್ಯ ವ್ಯಕ್ತಿ. ಅವರಲ್ಲಿ ಬುದ್ಧನ ಶಾಂತಿ ಮತ್ತು ಪ್ರೀತಿ, ಬಸವಣ್ಣನವರ ನೀತಿ ಮತ್ತು ಅಂಬೇಡ್ಕರ್ ಅವರ ಸಮಾನತೆಯ ಕನಸು ಇತ್ತು. ಪುಟ್ಟಣ್ಣಯ್ಯ ಎಲ್ಲಾ ದಾರ್ಶನಿಕರ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ಇದರಿಂದಾಗಿ ಮೇಲುಕೋಟೆ ಕ್ಷೇತ್ರದಲ್ಲಿ ಶಾಂತಿ ನೆಲಸಿದೆ, ಸರ್ವಜನಾಂಗದ ಶಾಂತಿಯ ತೋಟವಾಗಿ ತಮ್ಮ ಕ್ಷೇತ್ರವನ್ನು ಬೆಳೆಸಿದ್ದಾರೆ, ಕಷ್ಟದಲ್ಲಿರುವ ಅವರ ಕುಟುಂಬಕ್ಕೆ ನಾವೆಲ್ಲ ಶಕ್ತಿ ತುಂಬಬೇಕಿದೆ ಎಂದರು.

ವಕೀಲ ಮುರಳಿ ಮಾತನಾಡಿ, ಪುಟ್ಟಣ್ಣಯ್ಯ ಒಬ್ಬ ಆದರ್ಶ ವ್ಯಕ್ತಿತ್ವಹೊಂದಿದೆ ನಾಯಕರು, ಅತ್ಯಂತ ಸರಳತೆಯಿಂದ ಬದುಕು ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಪುಟ್ಟಣ್ಣಯ್ಯ ಕಡೇತನಕವೂ ಈ ಭಾಗದ ರೈತರ ಉದ್ಧಾರಕ್ಕೆ ಶ್ರಮಿಸಿದವರು ಅವರ ನಿಧನದ ನಂತರವೂ ಸರ್ಕಾರ 130 ಕೋಟಿ ಹಣ ಬಿಡುಗಡೆ ಮಾಡಿದೆ ಇದು ಪುಟ್ಟಣ್ಣಯ್ಯ ಅವರಿಗಿರುವ ಶಕ್ತಿ ಎಂದರು.

ಕಾರ್ಯಕ್ರಮದ ಉದ್ಘಾಟನೆ ನಂತರ ಪುಟ್ಟಣ್ಣಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಹಿರಿಯರು ಮತ್ತು ಮಹಿಳೆಯರು ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಅನ್ನಸಂತರ್ಪಣೆ ನಡೆಯಿತು.

ಮುಖಂಡರಾದ ಮಹೇಶ್, ಚಿಟ್ಟಿಬಾಬು, ತಾ.ಪಂ.ಸದಸ್ಯ ಕೆ.ಎಚ್.ಪುಟ್ಟರಾಮು, ಪುಟ್ಟಣ್ಣಯ್ಯ ಸಹೋದರ ರಮೇಶ್ ಅವರ ಪುತ್ರಿ ಮಾನಸ, ರೈತ ಮುಖಂಡ ಪಿ.ನಾಗರಾಜು, ಸ್ವಾಮೀಗೌಡ, ಕೃಷ್ಣೇಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಮುಖಂಡ ಸುನೀಲ್ ಕುಮಾರ್, ಕಸಾಪ ಅಧ್ಯಕ್ಷ ಎಂ.ರಮೇಶ್ ಮುಂತಾದವರು ಇದ್ದರು.

Leave a Reply

Your email address will not be published.