ತಾಳಶಾಸನದಲ್ಲಿ ದಲಿತ ಯುವಕನ ಮೇಲೆ ಹಲ್ಲೆ

ಅಭಿಷೇಕ್ ಹಲ್ಲೆಗೊಳಗಾದ(21) ಯುವಕ

ಪಾಂಡವಪುರ : ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದನ್ನು ಪ್ರಶ್ನಿಸಿದ ದಲಿತ ಯುವಕನ ಮೇಲೆ ಮೂವರು ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ತಾಳಶಾಸನ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ಜವರಪ್ಪ ಎಂಬುವರ ಮಗ ಅಭಿಷೇಕ್ ಹಲ್ಲೆಗೊಳಗಾದ(21) ಯುವಕ. ಸೋಮವಾರ ಸಂಜೆ ಅಭಿಷೇಕ್ ತಮ್ಮ ಜಮೀನಿನ ಬಳಿ ಹೋಗಿದ್ದ ವೇಳೆ ಇದೇ ಗ್ರಾಮದ ಪ್ರಶಾಂತ ಮತ್ತು ಹರೀಶ ಎಂಬುವರು ಅಭಿಷೇಕ್ ಜಮೀನಿನಲ್ಲಿ ಅಕ್ರಮವಾಗಿ ಮರಳು ತೆಗೆದಿದ್ದರು. ಗ್ರಾಮದ ಹುಚ್ಚಮ್ಮನ ದೇವಾಲಯದ ಮುಂದೆ ಇದನ್ನು ಪ್ರಶ್ನಿಸಿದ ಅಭಿಷೇಕ್ ಮೇಲೆ ಪ್ರಶಾಂತ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ಮತ್ತೆ ಅದೇ ದಿನ ರಾತ್ರಿ ಪ್ರಶಾಂತ ಮತ್ತು ಅವನ ಸಹೋದರ ಹರೀಶ ಎಂಬುವರು ಮತ್ತೊಬ್ಬ ವ್ಯಕ್ತಿ ಸತೀಶ ಎಂಬುವನೊಂದಿಗೆ ಸೇರಿ ಅಭಿಷೇಕನ ಮನೆ ಬಳಿ ಬಂದು ಮತ್ತೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಅಭಿಷೇಕ್ ಪಾಂಡವಪುರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.