ಕಾಮನವೆಲ್ತ್ ನಲ್ಲಿ ದೇಶಕ್ಕೆ ಮೊದಲ ಪದಕ: ಕನ್ನಡಿಗನಿಗೆ ಅಭಿನಂದಿಸಿದ ಸೆಹ್ವಾಗ್


ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡಿಗನ ಶ್ರಮದಿಂದ ಭಾರತಕ್ಕೆ ಮೊದಲ ಪದಕ ಲಭಿಸಿದೆ.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ 21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಉಡುಪಿಯ ಗುರುರಾಜ್‌ ವೇಟ್‌ ಲಿಫ್ಟಿಂಗ್‌‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಪದಕ ಗೆದ್ದ ಗುರುರಾಜ್‌ಗೆ ಟ್ವೀಟರ್ ನಲ್ಲಿ ಅಭಿನಂದನೆ ತಿಳಿಸಿದ್ದಾರೆ.

 56 ಕೆಜಿ ವಿಭಾಗದ ವೇಟ್‌ ಲಿಫ್ಟಿಂಗ್‌‌ನಲ್ಲಿ 249 ಕೆ.ಜಿ ತೂಕ ಎತ್ತುವ ಮೂಲಕ ಗುರುರಾಜ್‌ ಮೊದಲ ದಿನವೇ ಪದಕಕ್ಕೆ ಮುತ್ತಿಕ್ಕಿದ್ದು, ಭಾರತ ಪದಕದ ಖಾತೆ ತೆಗೆದಿದೆ.

ನಾವು ಮೊದಲ ಪದಕವನ್ನು ಗೆದ್ದಿದ್ದೇವೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಗುರುರಾಜ್‌ಗೆ ಅಭಿನಂದನೆಗಳು. ಗುರುರಾಜ್‌ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಸೆಹ್ವಾಗ್  ಟ್ವೀಟ್‌ ಮಾಡಿದ್ದಾರೆ.

ಸೆಹ್ವಾಗ್‌ ಟ್ವೀಟ್‌  ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

Leave a Reply

Your email address will not be published.