ವರ್ಷ ತುಂಬಿದ ‘ ಉದಯ ನಾಡು ‘: ಶೀಘ್ರದಲ್ಲೇ ಪತ್ರಿಕೆಯಾಗಿ ಓದುಗರ ಕೈಗೆ !


ನಿಮ್ಮೆಲ್ಲರ ನೆಚ್ಚಿನ ಸುದ್ದಿ ಜಾಲ ತಾಣ ” ಉದಯ ನಾಡು ‘ ಇದೀಗ ಒಂದು ವರ್ಷ  ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಎರಡನೇ ವರ್ಷಕ್ಕೆ ದಾಪುಗಾಲಿಟ್ಟಿದೆ.

ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಏಪ್ರಿಲ್ 15,  2017 ರಂದು ಈ ಜಾಲತಾಣಕ್ಕೆ ಚಾಲನೆ ನೀಡಿದ್ದರು. ಅವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಫಲವಾಗಿ ಜಾಲತಾಣ  ಇದೀಗ 21 ಲಕ್ಷಕ್ಕೂ ಅಧಿಕ ಓದುಗರನ್ನು ಗಳಿಸಿದೆ.

ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಹೆಚ್ಚುತ್ತಲೇ ಇದ್ದು, ನಿತ್ಯ ಸಾವಿರಾರು ಓದುಗರು ಸೇರ್ಪಡೆಯಾಗುತ್ತಲೇ ಇದ್ದಾರೆ.

ವೆಬ್ಸೈಟ್, ವಾಟ್ಸ್ ಅಪ್, ಫೇಸ್ಬುಕ್ ರೂಪದಲ್ಲಿ ತೆರೆದುಕೊಂಡ ಈ ಜಾಲತಾಣ ಈಗ  ಮೊಬೈಲ್ ಆ್ಯಪ್ ಮೂಲಕ ವಿದ್ಯಮಾನಗಳ ಮಾಹಿತಿ ತಲುಪಿಸುತ್ತಿದೆ.

ರಾಜ್ಯ, ದೇಶ, ವಿದೇಶ ಮತ್ತು ಸ್ಥಳೀಯ ವಿದ್ಯಮಾನಗಳ ಮಾಹಿತಿಯನ್ನು ಶೀಘ್ರವಾಗಿ ತಲುಪಿಸುವಲ್ಲಿ ಉದಯನಾಡು ಮುಂಚೂಣಿಯಲ್ಲಿದೆ.  ಇದೆಲ್ಲಕ್ಕೂ ಕಾರಣ  ಓದುಗರ ಪ್ರೋತ್ಸಾಹ ಹಾಗೂ ನಮ್ಮ  ಎಲ್ಲ ಜಿಲ್ಲಾ ವರದಿಗಾರರು,  ತಾಲೂಕು ವರದಿಗಾರರು ಹಾಗೂ ಕಚೇರಿಯ ಸಿಬ್ಬಂದಿ.

ಶೀಘ್ರ ಮುದ್ರಣ ಮಾಧ್ಯಮಕ್ಕೆ:

ಓದುಗರು ನೀಡಿರುವ, ನೀಡುತ್ತಿರುವ  ಪ್ರೋತ್ಸಾಹದಿಂದ ಪ್ರೇರಣೆ ಪಡೆದುಕೊಂಡಿರುವ  ಉದಯ ನಾಡು ತಂಡ ಶೀಘ್ರವೇ ರಾಜ್ಯಮಟ್ದದ ಪತ್ರಿಕೆಯಾಗಿ ಹೊರಹೊಮ್ಮಲಿದೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನುಮಾಡಿಕೊಳ್ಳಲಾಗುತ್ತಿದ್ದು, ಸುಂದರ ಸಂಚಿಕೆ ಓದುಗರ ಕೈಸೇರಲಿದೆ.

ಉದಯನಾಡು ಜಾಲತಾಣ  ಪರಿಣಾಮಕಾರಿ ಮಾಹಿತಿಯ ಜತೆ ಸಾಮಾಜಿಕ ಹಿತ, ಪ್ರಗತಿಯ ಉದ್ದೇಶ ಹೊತ್ತು ಎಂದಿನಂತೆ  ಕೆಲಸ ಮಾಡಲಿದೆ.  ಜಾಲ ತಾಣ ಸಮಾಜಕ್ಕೆ ಬದ್ಧವಾಗಿ ಹೊಣೆಗಾರಿಕೆಯಿಂದ ಕೆಲಸ ಮಾಡಲಿದೆ.  ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿಯನ್ನು ಅರಿಯಲು, ಸಾರ್ವಜನಿಕರೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ವೇದಿಕೆಯಾಗಿ ಈ ತಾಣ ಕಾರ್ಯ ನಿರ್ವಹಿಸಲಿದೆ.

ಮಾಧ್ಯಮಗಳಿಗೆ ಬೌಂಡರಿಗಳು ಇರಬಾರದು. ಆದರೆ ಜವಾಬ್ದಾರಿಗಳು ಇರಲೇಬೇಕು. ವಾಸ್ತವದ ನೆಲೆಗಟ್ಟಿನಲ್ಲಿ ಸಮರ್ಥ ಜನಾಭಿಪ್ರಾಯ ರೂಪಿಸುವ ದೊಡ್ಡ ಜವಾಬ್ದಾರಿಯನ್ನು ಮಾಧ್ಯಮಗಳು ನಿರ್ವಹಿಸಬೇಕು ಎಂಬುದು ನಮ್ಮ ನಿಲುವು. ಸಮಸ್ಯೆಗಳನ್ನು ಸಮಾಜಕ್ಕೆ ತಲುಪಿಸಬೇಕು, ಅದೇ ಸಮಸ್ಯೆಗಳನ್ನು ಪ್ರಚಾರ ಮಾಡಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಬಾರದು ಎಂಬುದು ನಮ್ಮ ಅನಿಸಿಕೆ. ಮಾಧ್ಯಮಗಳು ಮೂಢನಂಬಿಕೆ ಬಿತ್ತುವ ಮಾಹಿತಿ, ಸುದ್ದಿಗಳಿಗೆ ಪ್ರಚಾರ ನೀಡಬಾರದು, ಪ್ರೇರಣೆಯಾಗಬಾರದು ಎಂಬುದು ನಮ್ಮ ಆಶಯ. ಮಾಧ್ಯಮಗಳು ಮಾಹಿತಿ ನೀಡಬೇಕು, ಪ್ರಜಾಪ್ರಭುತ್ವ ಮಾದರಿಯಲ್ಲಿ ಅಭಿಪ್ರಾಯಗಳನ್ನು ರೂಪಿಸಬೇಕು. ಇದಕ್ಕೆ ಹೊರತಾಗಿ ತಾವೇ ತೀರ್ಪು ನೀಡುವ ಹಂತವನ್ನು ತಲುಪಬಾರದು ಎಂಬುದು ಉದಯನಾಡು ತಂಡದ   ಅಭಿಪ್ರಾಯ.

-ಉದಯನಾಡು ಬಳಗ , ಬೆಳಗಾವಿ

10 Responses to "ವರ್ಷ ತುಂಬಿದ ‘ ಉದಯ ನಾಡು ‘: ಶೀಘ್ರದಲ್ಲೇ ಪತ್ರಿಕೆಯಾಗಿ ಓದುಗರ ಕೈಗೆ !"

 1. S. R. Gurubasanbavar   April 15, 2018 at 12:10 pm

  ಬೇಗ ಲೋಕಾರ್ಪಣೆ ಯಾಗಿ ರಾಷ್ಟ್ರ ಮಟ್ಟದ ಪತ್ರಿಕೆಯಾಗಿ ಹೊರಹೊಮ್ಮಲೆಂದು ಹಾರೈಸುವೆ.

  Reply
 2. Chidambar kurubar   April 15, 2018 at 12:45 pm

  All the best sir….????

  Reply
 3. Wilfred Dsouza   April 15, 2018 at 12:53 pm

  ಎಲ್ಲ ಆಶಯಗಳು ಸಾಕಾರ ಆಗುವುದಿಲ್ಲ ಎನ್ನುವುದು ನನ್ನ ಅನುಭವ. ಉದಯ ನಾಡು ಪ್ರಭಲವಾದ, ಜನಪರ, ಜೀವಪರ, ಪ್ರಗತಿಪರ ಮತ್ತು ವೈಚಾರಿಕ ಪ್ರಜ್ಞೆಯ ಮುದ್ರಣ ಮಾಧ್ಯಮವಾಗಲಿ ಎನ್ನುವ ಆಶಯ ಸಾಕಾರವಾಗಲಿ.

  Reply
 4. Gangadhar kanchipura   April 15, 2018 at 3:46 pm

  ಶುಭವಾಗಲಿ

  Reply
 5. darshan   April 15, 2018 at 6:01 pm

  ಅದಷ್ಟು ಬೇಗ ಬರಲಿ‌‌ ಮತ್ತು ಶುಭವಾಗಲಿ.

  Reply
 6. ತೋಳಿ ಭರಮಣ್ಣ   April 15, 2018 at 7:24 pm

  ಶುಭವಾಗಲಿ

  Reply
 7. Okeshnayaka   April 16, 2018 at 7:28 am

  ನಮ್ಮ ಉದಯನಾಡು ಪತ್ರಿಕೆ ಬೇಗ ಸಾರ್ವಜನಿಕರ ಕೈಸೇರಲಿ ಶುಭವಾಗಲಿ.

  Reply
 8. Praveen onkari   April 16, 2018 at 4:41 pm

  ಹುಬ್ಬಳ್ಳಿ, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಉದಯನಾಡು ಹೊಸ ಸಂಚಲನ ಮೂಡಿಸಿದೆ. ಮುದ್ರಣ ಮಾಧ್ಯಮ ಲೋಕಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ ಉದಯನಾಡು ಪತ್ರಿಕೆ ಬೇಗ ತಮ್ಮ ಕೈ ಸೇರಲಿ ಎನ್ನುವುದು ಓದುಗರ ಅಭಿಪ್ರಾಯವಾಗಿದೆ. ಅದು ನಮ್ಮ ಆಶಯವೂ ಕೂಡ

  Reply
 9. Shabbir   April 17, 2018 at 5:44 pm

  ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿ…

  Reply
 10. ಶಿವು ಪೂಜಾರ   August 22, 2018 at 1:37 pm

  ಈ ನಮ್ಮ ಉದಯ ನಾಡು ಪತ್ರಿಕೆ ವಂದು ಸಾಮಾಜಿಕ ಮತ್ತು ಶೋಷಿತರ ಮತ್ತು ಮೌಢ್ಯ ತೋಲಗಿಸುವಂತ ಪತ್ರಿಕೆ ಯಾಗಿದೆ ಇದಕ್ಕೆ ಯಲ್ಲರು ಕೈ ಜೋಡಿಸೋಣ ಇದು ನಮ್ಮ ಅಣ್ಣಾ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನಾವು ನೀವೆಲ್ಲರೂ ಮುನ್ನಡೆಯೋಣ

  Reply

Leave a Reply

Your email address will not be published.