ಸಚಿವ ಎಚ್. ಆಂಜನೇಯ ಸೋಲು


ಚಿತ್ರದುರ್ಗ:  ಹೊಳೆಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್. ಆಂಜನೇಯ ಅವರು ಸೋಲನುಭವಿಸಿದ್ದಾರೆ.

ಸಚಿವ ಆಂಜನೇಯ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಚಂದ್ರಪ್ಪ 24800 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪ್ರಮುಖ ಸಚವಿರು ಕೂಡ ಭಾರಿ ಹಿನ್ನಡೆ ಸಾಧಿಸುತ್ತಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ಸಚಿವ ವಿನಯ ಕುಲಕರ್ಣಿ, ಬಸವರಾಜ್ ರಾಯರೆಡ್ಡಿ, ಉಮಾಶ್ರೀ, ಸಂತೋಷ ಲಾಡ್ ಸೇರಿದಂತೆ ಅನೇಕ ಸಚಿವರು ಹಿನ್ನಡೆ ಇದ್ದಾರೆ.

ಇತ್ತ ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ  ಗೆಲುವಿನ ನಾಗಲೋಟ ಮೆರೆದಿದ್ದಾರೆ. ಹಳಿಯಾಳದಲ್ಲಿ ಆರ್.ವಿ.ದೇಶಪಾಂಡೆ ಜಯಭೇರಿ ಭಾರಿಸಿದ್ದಾರೆ.

Leave a Reply

Your email address will not be published.