ಅಥಣಿ: ಬಿಜೆಪಿ ಬ್ಲೂ ಬಾಯ್ ಗೆ ಠಕ್ಕರ್ ಕೊಟ್ಟ ಮಹೇಶ ಕುಮಟಳ್ಳಿ


  • ಕಾಗವಾಡದಲ್ಲಿ ಕಾಗೆಗೆ ಹೀನಾಯ ಸೋಲು
  • ಬಿಜೆಪಿ ಭದ್ರಕೋಟೆ ಭೇದಿಸಿದ ಕಲಿಗಳು
  • ಎರಡು ಕ್ಷೇತ್ರದಲ್ಲಿ ಬಂಬಲಿಗರಿಂದ ಅದ್ದೂರಿ ಸಂಭ್ರಮಾಚಣೆ

ಅಥಣಿ:  ಬಿಜೆಪಿ ಭದ್ರಕೋಟೆಯಾಗಿದ್ದ ಅಥಣಿ ಹಾಗೂ ಕಾಗವಾಡ ಎರಡೂ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಶ ಕುಮಟಳ್ಳಿ ಒಟ್ಟು 61395 ಮತಗಳನ್ನು ಪಡೆಯುವ ಮೂಲಕ ವಿಜಯ ಪತಾಕೆ ಹಾರಿಸಿದ್ದಾರೆ. ಸತತ ಮೂರು ಬಾರಿ ಬಿಜಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಬ್ಲೂ ಬಾಯ್ ಖ್ಯಾತಿಯ ಲಕ್ಷ್ಮಣ ಸವದಿ 1726 ಮತ ಅಂತರದಿಂದ ಸೋಲನುಭವಿಸಿದ್ದಾರೆ.

ಇನ್ನು ಕಾಗವಾಡ ಕೂಡ ಬಿಜೆಪಿ ಭದ್ರಕೋಟೆಯಾಗಿದ್ದು, ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಶ್ರೀಮಂತ ಪಾಟೀಲ್ 69261 ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ.  ಬಿಜೆಪಿಯ ರಾಜು ಕಾಗೆ 41762 ಮತಗಳನ್ನು ಪಡೆದಿದ್ದಾರೆ.   ಈ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಬಿಜೆಪಿಯಿಂದ ಗೆಲವು ಸಾಧಿಸಿದ್ದ ರಾಜು ಕಾಗೆಗೆ ತೀವ್ರ ಮುಖಭಂಗವಾಗಿದೆ. ಒಟ್ಟು 27499 ಮತಗಳ ಅಂತರದಿಂದ ಶ್ರೀಮಂತ ಪಾಟೀಲ್ ಗೆಲವು ಸಾಧಿಸಿ ವಿಜಯ ಪತಾಕೆ ಹಾರಿಸಿದ್ದಾರೆ.

ಅಭಿವೃದ್ದಿ ಕೊರತೆ ಹಾಗೂ ಉಗಾರ ಗ್ರಾಮದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ  ರಾಜು ಕಾಗೆಗೆ ತೀವ್ರ ಪೆಟ್ಟು ನೀಡಿವೆ.

ಅಥಣಿ ಮತ್ತು ಕಾಗವಾಡ ಎರಡು ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆ ಎಂದೇ ಹೆಸರು ವಾಸಿಯಾಗಿತ್ತು. ಕಾಂಗ್ರೆಸ್ ನ ಪ್ರಮುಖ ನಾಯಕರಾದ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ ಎರಡು ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದರ ಫಲವಾಗಿ ಕಾಂಗ್ರೆಸ್ ಗೆ ಜಯ ಸಾಧಿಸಲು ಸಾಧ್ಯವಾಗಿದೆ.

ಅಥಣಿ ಹಾಗೂ ಕಾಗವಾಡ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸುತ್ತಿದ್ದಾರೆ.

One Response to "ಅಥಣಿ: ಬಿಜೆಪಿ ಬ್ಲೂ ಬಾಯ್ ಗೆ ಠಕ್ಕರ್ ಕೊಟ್ಟ ಮಹೇಶ ಕುಮಟಳ್ಳಿ"

  1. Hemant r mang   May 15, 2018 at 3:46 pm

    Super new
    Tq

    Reply

Leave a Reply

Your email address will not be published.