ಬೆಳಗಾವಿ: ಎರಡು ಕ್ಷೇತ್ರಗಳಲ್ಲಿ ಜಯ ಹೆಚ್ಚಿಸಿಕೊಂಡ ಕಾಂಗ್ರೆಸ್, ಎಂಇಎಸ್ ಧೂಳಿಪಟ


ಬೆಳಗಾವಿ: ಬೆಂಗಳೂರಿನ ನಂತರ  ಅತಿ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ಕೈ ಮತ್ತೆ ಮೇಲಾಗಿದೆ.

ಕಳೆದ ಚುನಾವಣೆಯಲ್ಲಿ ಕೇವಲ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಜಿಲ್ಲೆಯಲ್ಲಿ 8 ಸ್ಥಾನಗಳು ಲಭಿಸಿದ್ದು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ಹೊತ್ತಿದ್ದ ಜಾರಕಿಹೊಳಿ ಸಹೋದರರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಕಳೆದ ಸಲ ಗೆಲುವು ಸಾಧಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಈ ಸಲ ಹೇಳ ಹೆಸರಿಲ್ಲದಂತೆ ಧೂಳಿಪಟವಾಗಿ ಹೋಗಿದೆ.

ಎಂ.ಇ.ಎಸ್. ಹಿಡಿತದಲ್ಲಿದ್ದ  ಖಾನಾಪುರ ಕ್ಷೇತ್ರವನ್ನು ತೆಕ್ಕೆಗೆ  ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳನ್ನು ಬಿಜೆಪಿ ಬಿಗಿ ಮುಷ್ಟಿಯಿಂದ ಕಸಿದುಕೊಂಡಿದೆ.

ಅಥಣಿ, ಕಾಗವಾಡ, ಚಿಕ್ಕೋಡಿ-ಸದಲಗಾ, ಖಾನಾಪುರ, ಬೈಲಹೊಂಗಲ, ಗೋಕಾಕ, ಯಮಕನಮರಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಕಳೆದ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ಆ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಜತೆಗೆ ಕುಡಚಿಯಲ್ಲಿ ಪಕ್ಷಕ್ಕೆ ಸೇರಿದ್ದ ಪಿ. ರಾಜೀವ್ ಅವರನ್ನು ಗೆಲ್ಲಿಸುವ ಮೂಲಕ ತನ್ನ ಸ್ಥಾನಗಳನ್ನು ಕಾಪಾಡಿಕೊಂಡಿದೆ.

ಬೆಳಗಾವಿ ಉತ್ತರ ಮತ್ತು ದಕ್ಷಿಣ, ನಿಪ್ಪಾಣಿ, ರಾಮದುರ್ಗ, ರಾಯಬಾಗ, ಕುಡಚಿ, ಸವದತ್ತಿ, ಕಿತ್ತೂರು, ಅರಬಾಂವಿ ಹಾಗೂ ಹುಕ್ಕೇರಿ ಕ್ಷೇತ್ರಗಳಲ್ಲಿ  ಕಮಲ ಅರಳಿದೆ.

Leave a Reply

Your email address will not be published.