ಬೆಳಗಾವಿ ಉತ್ತರ, ದಕ್ಷಿಣದಲ್ಲೂ ಕಮಲದ ಕಲರವ


ಬೆಳಗಾವಿ: ಉತ್ತರ ಹಾಗೂ ದಕ್ಷಿಣ ಎರಡು ಮತ ಕ್ಷೇತ್ರದಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಫಿರೋಜ್ ಸೇಠ್ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಿಕೊಂಡು ಬಂದಿದ್ದರು. ಸೇಠ್ ಕೋಟೆಯನ್ನು ಭೇದಿಸಿ ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಬೆನಕೆ ಕಮಲ ಅರಳಿಸಿದ್ದಾರೆ.

ಸುಮಾರು 18000 ಸಾವಿರ ಮತಗಳ ಅಂತರದಿಂದ ಅನಿಲ್ ಬೆನಕೆ ಜಯಭೇರಿ ಭಾರಿಸಿದ್ದು, ಬೆಂಬಲಿಗರು ಸಂಭ್ರಮಾಚರಿಸುತ್ತಿದ್ದಾರೆ.

ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದು,  ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್ ಗೆಲವು ಸಾಧಿಸುವ ಮೂಲಕ ಮತ್ತೆ ತಮ್ಮ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ.

Leave a Reply

Your email address will not be published.