ಗೋಕಾಕದಲ್ಲಿ ಸಚಿವ ರಮೇಶ ಜಾರಕಿಹೊಳಿಗೆ ಹಿನ್ನಡೆ


ಬೆಳಗಾವಿ: ತೀವ್ರ ಕುತುಹಲ ಕೆರಳಿಸಿದ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ 2300 ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಅಶೋಕ ಪುಜಾರಿ 2013ರ ಚುನಾವಣೆಯಲ್ಲಿ  ಸಚಿವ ರಮೇಶ ಜಾರಕಿಹೊಳಿ ಎದುರು ಸ್ಪರ್ಧಿಸಿ ಪರಾವಗೊಂಡಿದ್ದರು.

ಧಾರವಾಡ ಕ್ಷೇತ್ರದಲ್ಲಿ ಸಚಿವ ವಿನಯ ಕುಲಕರ್ಣಿ, ಹಾಗೂ ಕಲಘಟಗಿ ಕ್ಷೇತ್ರದಲ್ಲಿ ಸಂತೋಷ ಲಾಡ್ ಕೂಡ ಹಿನ್ನಡೆ ಸಾಧಿಸಿದರೆ, ಬೆಳಗಾವಿ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್, ಬೆಳಗಾವಿ ಉತ್ತರದಲ್ಲಿ ಬಿಜೆಪಿ ಅನಿಲ್ ಬೆನಕೆ, ಅಥಣಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅಲ್ಪ ಮತಗಳಲ್ಲಿ ಮುಂದಿದ್ದಾರೆ.

ಇನ್ನೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ, ಕುಡಚಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮಿತ ಘಾಟಗೆ ಮುಂದಿದ್ದಾರೆ.

Leave a Reply

Your email address will not be published.