ನಡೆಯದ ಶಾ ಆಟ: ಗೋಕಾಕನಲ್ಲಿ ಮತ್ತೆ ರಮೇಶ ಜಾರಕಿಹೊಳಿ ಗೆಲುವು


ಗೋಕಾಕ: ಇಡೀ ರಾಜ್ಯದ ಗಮನ ಸೆಳೆದಿದ್ದ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ.

ಬಿಜೆಪಿಯ  ಅಶೋಕ  ಪೂಜಾರಿ ಅವರಿಂದ ತೀವ್ರ ಪೈಪೋಟಿ ಎದುರಿಸಿದ್ದ ಸಚಿವ ರಮೇಶ ಜಾರಕಿಹೊಳಿ 14280 ಮತಗಳ ಭಾರೀ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಸತತ ಐದನೇ ಬಾರಿ ವಿಧಾನಸಭೆ ಪ್ರವೇಶಿಸಿರುವ ರಮೇಶ ಜಾರಕಿಹೊಳಿ ಅವರನ್ನು ಈ ಬಾರಿ ಹೇಗಾದರೂ ಮಾಡಿ ಸೋಲಿಸಬೇಕೆಂದು ಬಿಜೆಪಿ ಹರಸಾಹಸ ಮಾಡಿತ್ತು. ಅದಕ್ಕೆಂದೇ ಬಿಜೆಪಿ ಚಾಣಕ್ಯ ಅಮಿತ ಶಾ ರೋಡ್ ಶೋ ಮೂಲಕ ಮತದಾರರ ಗಮನ ಸೆಳೆಯಲು ಯತ್ನಿಸಿದ್ದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದ  ಸುರೇಶ ಅಂಗಡಿ, ಮಾಜಿ ಸಚಿವ ಲಕ್ಷ್ಮಣ ಸವಡಿ, ಪ್ರಭಾಕರ ಕೋರೆ ಸೇರಿದಂತೆ ಅನೇಕ ನಾಯಕರು ಪೂಜಾರಿ ಬೆನ್ನಿಗೆ ನಿಂತು ಗೆಲುವಿನ ಹಾದಿ ತುಳಿಯಲು ಯತ್ನಿಸಿದ್ದರು.

ಆದರೆ, ಶಾ ಆಟ ಕಾಂಗ್ರೆಸ್ಸಿನ ಭದ್ರಕೋಟೆಯಲ್ಲಿ ನಡೆಯಲೇ ಇಲ್ಲ.

Leave a Reply

Your email address will not be published.