ಸಂಜೆ ರಾಜ್ಯಪಾಲರ ಭೇಟಿ ಮಾಡಲಿರುವ ಕುಮಾರಸ್ವಾಮಿ


ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಂಗಳವಾರ ನಡೆದ ಮಿಂಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮತ್ತಷ್ಟು ಗಟ್ಟಿಯಾಗಿದ್ದು, ಸರಕಾರ ರಚನೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ರೆಡಿಯಾಗಿದ್ದಾರೆ.

ಮ್ಯಾಜಿಕ್ ನಂಬರ ತಲುಪಲು ಬಿಜೆಪಿ ವಿಫಲವಾದ ಬೆನ್ನಲ್ಲೇ ಜಾಣ ನಡೆ ತೋರಿದ ಕಾಂಗ್ರೆಸ್ ಪಕ್ಷ, ಬೇಷರತ್ತಾಗಿ ಜೆಡಿಎಸ್ ಗೆ ಬೆಂಬಲಿಸುವುದಾಗಿ ಘೋಷಿಸಿದ್ದು , ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಮೂಡಿಸಿತು.

ಅದರ ಬೆನ್ನಲ್ಲೇ ಜೆಡಿಎಸ್ ಮುಖಂಡರೊಡನೆ ಮಾತನಾಡಿದ ಕಾಂಗ್ರೆಸ್ ನಾಯಕರು, ಸರಕಾರ ರಚೆನೆಗೆ ಬೆಂಬಲಿಸುವ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಜೆಡಿಎಸ್ ವರಿಷ್ಠ , ಮಾಜಿ ಪ್ರಧಾನಿ ದೇವೇಗೌಡರ ಸೂಚನೆಯಂತೆ ರಾಜ್ಯಪಾಲರಿಗೆ ಹಕ್ಕು ಮಂಡಿಸಲು ಜೆಡಿಎಸ್ ಪತ್ರ ಸಿದ್ದಪಡಿಸಿಕೊಂಡಿದ್ದು, ಸಂಜೆ 5 ರಿಂದ 6 ಗಂಟೆ ಒಳಗೆ ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕು ಮಂಡಿಸಲಿದ್ದಾರೆ.

Leave a Reply

Your email address will not be published.