ಯಮಕನಮರಡಿ: ಸತೀಶ ಜಾರಕಿಹೊಳಿ ಭರ್ಜರಿ ಗೆಲುವು


ಬೆಳಗಾವಿ: ಎಐಸಿಸಿ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಐದನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಮೋದಿ ಅಲೆಯಲ್ಲಿ ತೇಲಾಡುತ್ತಿದ್ದ ಸಮೀಪದ ಪ್ರತಿಸ್ಪರ್ಧಿ ಮಾರುತಿ ಅಷ್ಟೇಕರ್ ಅವರನ್ನು 8000 ಮತಗಳ ಅಂತರದಿಂದ ಜಾರಕಿಹೊಳಿ ಸೋಲಿಸಿದ್ದಾರೆ.

ರಾಜ್ಯಾದ್ಯಂತ  ಇದ್ದ ಮೋದಿ ಅಲೆಯ ನಡುವೆಯೇ ನಾಮಪತ್ರ ಸಲ್ಲಿಕೆ ನಂತರ ಒಂದು ದಿನವೂ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗದೇ ಸತೀಶ ಜಾರಕಿಹೊಳಿ ಗೆಲುವು ಸಾಧಿಸಿರುವುದು ವಿಶೇಷ.

ಯಾವುದೇ ಅಬ್ಬರ- ಆಡಂಬರಗಳಿಲ್ಲದೇ  ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸಿದ್ದ ಅವರು, ಸದ್ದುಗದ್ದಲವಿಲ್ಲದೇ ಕಾರ್ಯಕರ್ತರ ನೆರವಿನಿಂದಲೇ ಪ್ರಚಾರ ಕಾರ್ಯ ಕೈಗೊಂಡು ಮಾದರಿ ಎನಿಸಿಕೊಂಡಿದ್ದರು.

ಸತೀಶ ಜಾರಕಿಹೊಳಿ ಗೆಲುವು ಸಾಧಿಸುತ್ತಲೇ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Leave a Reply

Your email address will not be published.