ಸಿದ್ದರಾಮಯ್ಯಗೆ ಒಲಿಯದ ಚಾಮುಂಡೇಶ್ವರಿ


ಮೈಸೂರು: ತೀವ್ರ  ಚರ್ಚೆ, ಕುತೂಹಲಕ್ಕೆ ಕಾರಣವಾಗಿದ್ದ ಚಾಮುಂಡೇಶ್ವರಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಹೀನಾಯ  ಸೋಲು ಅನುಭವಿಸಿದ್ದಾರೆ.

30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸ್ವಕ್ಷೇತ್ರದಲ್ಲಿ ಜೆಡಿಎಸ್ ನ ಜಿ.ಟಿ. ದೇವೇಗೌಡರಿಗೆ ಸೋಲೊಪ್ಪಿಕೊಂಡಿರುವ ಸಿದ್ದರಾಮಯ್ಯ, ಬಾದಾಮಿಯಲ್ಲಿ ಪ್ರಯಾಸದ ಗೆಲುವು ಸಾಧಿಸುವ ಮೂಲಕ ಮುಖ ಉಳಿಸಿಕೊಂಡಿದ್ದಾರೆ.

ಚುನಾವಣೆಗೆ ಮುನ್ನ ಭಾರೀ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಸಿದ್ಧರಾಮಯ್ಯ , ನಾಮಪತ್ರ ಸಲ್ಲಿಸುವ ಕೊನೆಯ ದಿನ ಸಮೀಪಿಸುತ್ತಿದ್ದಂತೆಯೇ ತುಸು ಗಲಿಬಿಲಿಯಲ್ಲೇ ಬಾದಾಮಿ  ಕ್ಷೇತ್ರದಲ್ಲಿ ಕಣಕ್ಕಿಳಿಯುವ ಮೂಲಕ  ಸುರಕ್ಷತೆ ಕಂಡುಕೊಂಡಿದ್ದರು.

Leave a Reply

Your email address will not be published.