ಕ್ಯಾನ್ಸರ್ ಜಾಗೃತಿಗಾಗಿ ಮೂಡಿಬರುತ್ತಿರುವ ಚಿತ್ರ ಅಮ್ಮು:ಯೋಗೇಶ್ ಮಾಸ್ಟರ್

ನಗರದ ಟೈಲರ್ ಮಂಜಿಲಿನಲ್ಲಿ ಚಲನಚಿತ್ರ ನಿರ್ದೇಶಕ ಹಾಗು ಚಿಂತಕ ಯೋಗೇಶ ಮಾಸ್ಟರ್ ಅಮ್ಮು ಚಿತ್ರದ ಕುರಿತು ಮಾತನಾಡಿದರು.

ಸುರಪುರ: ಜಗತ್ತಿನಲ್ಲಿ ಪ್ರತಿ ಮೂರು ನಿಮಿಷಕ್ಕೆ ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿ ಮರಣ ಹೊಂದುತ್ತಿದ್ದಾನೆ.ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸುವ ಕಾರಣದಿಂದ ಅಮ್ಮು ಎನ್ನುವ ಚಲನಚಿತ್ರವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಿರ್ಮಿಸುತ್ತಿರುವದಾಗಿ ಚಿಂತಕ ಹಾಗು ನಿರ್ದೇಶಕ ಯೋಗೇಶ್ ಮಾಸ್ಟರ್ ಮಾತನಾಡಿದರು.

ನಗರದ ಟೈಲರ್ ಮಂಜಿಲನಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಇಂದು ಜನರಲ್ಲಿ ರೋಗ ರುಜಿನಗಳ ಅರಿವಿಗಿಂತ ಭಕ್ತಿ,ಧಾರ್ಮಿಕ ನಂಬಿಕೆಗಳ ಬಗ್ಗೆ ಒಲವು ಹೆಚ್ಚುತ್ತಿದೆ.ಆದರೆ ವಾಸ್ತವದಲ್ಲಿ ವಿಜ್ಞಾನ ಎಲ್ಲವನ್ನು ತಿಳಿಸುತ್ತದೆ.ಬಕ್ತಿ ಎಂಬುದು ಮೌಢ್ಯವಾಗದೆ ಕೇವಲ ನಂಬಿಕೆಯಾಗಿದ್ದರೆ ಒಳ್ಳೆಯದು ಎಂದರು.

ನಮ್ಮ ದೇಶದಲ್ಲಿ ಅನೇಕರು ಇಂದು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಹಾಗು ಸಾವಿಗೀಡಾಗುತ್ತಿದ್ದಾರೆ.ಇದನ್ನ ಗಮನದಲ್ಲಿಟ್ಟುಕೊಂಡು ಜನರಲ್ಲಿ ಕ್ಯಾನ್ಸರ್ ರೋಗ ಉಲ್ಬಣಗೊಳ್ಳುವ ಮುನ್ನವೇ ಪರೀಕ್ಷೆಗೊಳಪಡುವ ವಶ್ಯವನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಚಿತ್ರದ ಮೂಲಕ ಮಾಡಲಾಗುತ್ತದೆ.ಈ ಹಿಂದೆ ವನ ಸಂಪತ್ತಿನ ರಕ್ಷಣೆಗಾಗಿ ಆನಂದ ವನ,ಸಂಬಂಧಗಳ ಕುರಿತಾದ ಮರಳಿ ಮನೆಗೆ ಹಾಗು ಕ್ಷಮೆಯಿರಲಿ ಎಂಬ ಮೂರು ಸಿನೆಮಾಗಳು ಮಾಡಿದ್ದಾಗಿ ಮಾಹಿತಿ ನೀಡಿದರು.

ಮುಂದೆ ಸುರಪುರದ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಇಂತಹ ಒಂದು ಭವ್ಯ ಇತಿಹಾಸವನ್ನು ಜಗತ್ತಿಗೆ ತಿಳಿಸುವ ಸಲುವಾಗಿ ಪ್ಯಾರೆ ಪಾಳ್ಯ ಎಂಬ ಸಿನೆಮಾವನ್ನು ಮಾಡುವದಾಗಿ ತಿಳಿಸಿದರು.

ಮಲ್ಲಿಕಾರ್ಜುನ ಸತ್ಯಂಪೇಟೆ,ದೇವಿಂದ್ರಪ್ಪ ಪತ್ತಾರ,ಮಲ್ಲಯ್ಯ ಕಮತಗಿ,ಅಹ್ಮದ ಪಠಾಣ,ಮೂರ್ತಿ ಬೊಮ್ಮನಹಳ್ಳಿ,ಬಲಭೀಮ ದೇಸಾಯಿ,ನಾಗರಾಜ ಚವಲ್ಕರ್,ಶಿವರುದ್ರ ಉಳ್ಳಿ,ಮಲ್ಲು ಚೊಕ್ಕಾ ಇದ್ದರು.

Leave a Reply

Your email address will not be published.