ತಂದೆ ಕ್ಷೇತ್ರ ಉಳಿಸಿಕೊಂಡ ಡಾ. ಯತೀಂದ್ರ


ಮೈಸೂರು: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ಧರಾಮಯ್ಯ  ಪುತ್ರ ಡಾ. ಯತೀಂದ್ರ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲತ  ಇತಿಹಾಸ ನಿರ್ಮಿಸಿದ್ದಾರೆ.

50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಯತೀಂದ್ರ , ತಂದೆಯ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಪುತ್ರ ವಿಜಯೇಂದ್ರ ಕಣಕ್ಕಿಳಿಯಬೇಕಿತ್ತು. ಕೊನೆ ಗಳಿಗೆಯಲ್ಲಿ ನಡೆದ ಮಿಂಚಿನ ರಾಜಕೀಯ ಬೆಳವಣಿಗೆಯಲ್ಲಿ ಟಿ. ಬಸವರಾಜು ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಬಸವರಾಜು ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದರು.

ಬಿಜೆಪಿಯ ಈ ನಿರ್ಧಾರ ಪಕ್ಷದ ಕಾರ್ಯಕರ್ತರ ಭಾರೀ ಆಕ್ರೋಷಕ್ಕೆ ಕಾರಣವಾಗಿತ್ತು.

Leave a Reply

Your email address will not be published.