ನಿದ್ದೆ ಮಂಪರಿನಲ್ಲಿ ಗೂಡ್ಸ್ ಲಾರಿಗಳು ಮುಖಾಮುಖಿ ಡಿಕ್ಕಿ: ಚಾಲಕರಿಗೆ ಗಂಭೀರಜಗಳೂರು:ಜಗಳೂರು ತಾಲೂಕಿನ ರಾಷ್ತ್ರೀಯ ಹೆದ್ದಾರಿ 13 ರ ಬಂಗಾರಕ್ಕನಗುಡ್ಡ ಸಮೀಪ ಗೂಡ್ಸ್ ತುಂಬಿದ ಲಾರಿಗಳೆರಡು ಮುಖಾಮುಖಿ ಡಿಕ್ಕಿ ಸಂಭವಿಸಿ ಚಾಲಕರಿಬ್ಬರು ಗಾಯ ಗೊಂಡ ಘಟನೆ ಶುಕ್ರವಾರ  ಬೆಳಗಿನ ಜಾವ 5 ಗಂಟೆಗೆ  ಸಂಭವಿಸಿದೆ. 

ಅಪಘಾತ ಸುದ್ದಿ ತಿಳಿದ ತಕ್ಷಣ ಜಗಳೂರು ಸಿ.ಪಿ.ಐ. ಬಿ.ಕೆ.ಲತಾ ನೇತೃತ್ವದ ತಂಡ ಹಾಗೂ ಅಗ್ನಿಶಾಮಕ ತಂಡ ಆಗಮಿಸಿ ಲಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಲಕರನ್ನ ರಕ್ಷಿಸಿ ಪಟ್ಟಣದ ಸಾರ್ವಜನಿಕ ಆಸ್ವತ್ರೆಗೆ ಸಾಗಿಸಿದ್ದಾರೆ.ಸದ್ಯ ಚಾಲಕರಿಬ್ಬರು ಪ್ರಾಣಾಪಯದಿಂದ ಪಾರಾಗಿದ್ದಾರೆ. 

ನಿದ್ದೆ ಮಂಪರಿನಲ್ಲಿ ಈ ಘಟನೆ ಸಂಭವಿಸಿದ್ದು ಹೊಸಪೇಟೆ ಹಾಗು ಚಿತ್ರದುರ್ಗ ಕಡೆಯಿಂದ ಬರುತ್ತಿದ್ದ ಲಾರಿಗಳು ವೇಗಮಿತಿಗೆ ಕಡಿವಾಣ ವಿಲ್ಲದೆ ಇಂತಹ ಘಟನೆಗಳು ಸಂಭವಿಸುತ್ತಿವೆ ರಸ್ತೆ ಕಾಮಗಾರಿ ನೆಡಯುತ್ತಿರುವುದರಿಂದ ಪ್ರಮುಖ ಸ್ಥಳಗಳಲ್ಲಿ ಹಾಗು ತಿರುವುಗಳಲ್ಲಿ ಅಪಘಾತ ವಲಯದ ನಾಮಪಲಕ ಅಳವಡಿಸಬೇಕೆಂದು ಸಾರ್ವನಿಕರು ಒತ್ತಾಯಿಸಿದರು. 

ಸ್ಥಳಕ್ಕೆ ಜಗಳೂರು ಪಿ.ಎಸ್.ಐ.ಮಂಜುನಾಥ, ಅರ್ಜುನ್ ಲಿಂಗಾರೆಡ್ಡಿ, ಎ .ಎಸ್.ಐ.ವೆಂಕಟೇಶ್ ರೆಡ್ಡಿ ಅಗ್ನಿಶಾಮಕಧಳದ ಹಸ್ಳಾಕರ್.ಪೋಲಿಸ್ ಸಿಬ್ಬಂದಿ ಗೋಣಿಬಸಪ್ಪ.ಜಯ್ಯಪ್ಪ.ಗೋವಿಂದ್ ರಾಜ್ ಪ್ರವೀಣ್ ಇತರರು ಭೇಟಿ ನೀಡಿದ್ದಾರೆ.

Leave a Reply

Your email address will not be published.