ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಚಾಮರಾಜನಗರದಲ್ಲಿಯೂ ಪ್ರತಿಭಟನೆ


ಚಾಮರಾಜನಗರ:  ಕಾಂಗ್ರೆಸ್- ದೋಸ್ತಿ ಸರಕಾರದಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಮಾನವ ಬಂಧುತ್ವ ವೇದಿಕೆ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಸತೀಶ ಜಾರಕಿಹೊಳಿ, ವಾಲ್ಮೀಕಿ ವಿಚಾರ ವೇದಿಕೆ, ಪ್ರಬುದ್ದ ಭಾರತ ನಿರ್ಮಾಣ ವೇದಿಕೆ, ಮಾರನಾಯಕ ವಿದ್ಯಾರ್ಥಿ ವೇದಿಕೆ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡಿದ ಸತೀಶ ಜಾರಕಿಹೊಳಿ ಅವರನ್ನು ಕಡೆಗಣಿಸಲಾಗಿದೆ. ಪಕ್ಷದ ವರಿಷ್ಠರು ಕೂಡಲೇ ಎರಡನೇ ಹಂತದ ಸಚಿವ ಸಂಪುಟ ವಿಸ್ತರಿಸಿ ಸತೀಶ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ನಾರಾಯಣ ಸ್ವಾಮಿ, ಸುಭಾಷ್ ಮಾಡ್ರಹಳ್ಳಿ, ರಾಜೇಶ್ ನಾಯಕ,  ಸತೀಶ್ ಜಾರಕಿಹೋಳಿ ಅಭಿಮಾನಿಗಳ ಬಳಗ ಅಧ್ಯಕ್ಷರು ವೃಷಬೇಂದ್ರ ಹಂಗಳ, ಮಹದೇವ ನಾಯಕ, ಸುರೇಶ್ ನಾಯಕ, ಸುಶೀಲಾ ರಾಮ ಸಮುದ್ರ, ರಂಗ ಸ್ವಾಮಿ ದಸಂಸ , ಶಿವ ಮಲ್ಲು, ನಾಗೇಶ್ ಭೋಗಪುರ, ಪುಟ್ಟಸ್ವಾಮಿ ಸೇರಿದಂತೆ ನೂರಾರು ಜನ ಕಾರ್ಯ ಕರ್ತರು ಭಾಗವಹಿಸಿದ್ದರು.

Leave a Reply

Your email address will not be published.