ಅನುಮತಿಯಿಲ್ಲದೇ ಜಮೀನಿನಲ್ಲಿ ವಿದ್ಯುತ್ ಕಂಬಗಳ ಜೋಡನೆ: ರೈತ ಮಹಿಳೆಯಿಂದ ಡಿಸಿಗೆ ಮನವಿ


ಮಧುಗಿರಿ: ಹತ್ತು ಎಕರೆ ಜಮೀನಲ್ಲಿ ಯಾವುದೇ ಪರಿಹಾರ ನೀಡದೆ ಏಕಾಏಕಿ ವಿದ್ಯುತ್ ಕಂಬಗಳ ಜೋಡಣಾ ಕಾರ್ಯಕ್ಕೆ ಪವರ್ ಗ್ರೀಡ್ ಕಾರ್ಪೂರೇಷನ್ ನವರು ಮುಂದಾಗಿದ್ದಾರೆಂದು ರೈತ ಮಹಿಳೆಯೊಬ್ಬಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾಳೆ.

ತಾಲ್ಲೂಕಿನ ಕೋಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗ್ರಾಮದ ಸ.ನಂ. 243/1ಡಿ ಜಮೀನುನಲ್ಲಿ ಕೆಲ ದಿನಗಳ ಹಿಂದೆ ಕೇಂದ್ರ ಸರಕಾರದ 400 ಕೆ.ಬಿ. ಪವರ್ ಟ್ರಾನ್ಸ್ ಮಿಷನ್ ಲೈನ್‍ನ್ನು ಆಂಧ್ರ ಪ್ರದೇಶದ ರಾಜ್ಯದ ಕಡಪ ಜಿಲ್ಲೆಯಿಂದ ತುಮಕೂರು ಟೌನ್ ವಸಂತ ನರಸಪುರದವರೆಗೆ ಟವರ್ ಗಳನ್ನು ಆಳವಡಿಸಲು ಸಿಬ್ಬಂದಿಗಳು ಬಂದಿದ್ದು ಯಾವುದೇ ಮೂಸ್ಸೂಚನೆ ಹಾಗೂ ಪರಿಹಾರ ನೀಡದೆ ಬೃಹತ್ ಗಾತ್ರದ ವಿದ್ಯುತ್ ಸ್ಥಾವರಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದರೆ.

ಇದರಿಂದಾಗಿ ಜಮೀನನಲ್ಲಿ ಇಟ್ಟಿರುವ ಬೆಳೆ ಮರವಳಿ ಹಾಗೂ ತೋಟದ ಮನೆ ಮತ್ತು 5 ಕೊಳವೆಬಾವಿಗಳು ಜಮೀನಿನಲ್ಲಿದ್ದು ವಿದ್ಯುತ್ ಸ್ಥಾವರವು ಜಮೀನಿನ ಮಧ್ಯೆ ಭಾಗದಲ್ಲಿ ಹಾದು ಹೋಗುತ್ತಿರುವುದರಿಂದ ನಷ್ಟ ಉಂಟಾಗಲಿದೆ ಜತೆಗೆ ಓಡಾಡಲು ಸಹ ಅನಾನೂಕೂಲ ವಾಗಿದೆ ಆದ್ದರಿಂದ ಜಂಟಿ ಮೌಲ್ಯ ನಿರ್ಧಾರಿತ ಸಮಿತಿಯ ಮೂಲಕ ಸೂಕ್ತ ವಾದ ಬೆಲೆ ನಿರ್ಧರಿಸಿ ನನಗೆ ನ್ಯಾಯ ದೊರಕಿಸಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಜಿಲ್ಲಾಧಿಕಾರಿ ಆದೇಶಕ್ಕೆ ತಾಲ್ಲೂಕಿನ ಅಧಿಕಾರಿಗಳು ಕವಡೆಕಾಸಿನ ಬೆಲೆಯೂ ನೀಡದೆ ಸತಾಯಿಸುತ್ತಿದ್ದಾರೆಂದು ಸಂತ್ರಸ್ಥ ಮಹಿಳೆ ದೂರಿದ್ದಾಳೆ ಈ ಬಗ್ಗೆ ಪವರ್ ಗ್ರೀಡ್ ಕಂಪನಿಯವರು ಸ್ಥಳ ಪರೀಶಿಲನೆ ಮಾಡಲು ಹಾಗೂ ಪರಿಹಾರ ನೀಡಲು ಸಹ ಹಿಂದೇಟು ಹಾಕುತ್ತಿದ್ದು ರೈತ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಾಲ್ಲೂಕಿನ ಪವರ್ ಗ್ರೀಡ್ ಕಂಪನಿಯವರು ಸರಿಯಾಗಿ ರೈತರಿಗೆ ಪರಿಹಾರ ನೀಡಲು ಮುಂದಾಗುತ್ತಿಲ್ಲ ಮತ್ತು ಲೈನ್ ಹಾದು ಹೋಗಲಿರುವ ಜಾಗಗಳಲ್ಲಿ ಎಷ್ಟು ಪರಿಹಾರ ಮೊತ್ತ ನೀಡಲಾಗುತ್ತೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಹಾಗೂ ಜಿಲ್ಲಾಧಿಕಾರಿಗಳ ಆದೇಶಕ್ಕೆ ಅಸಡ್ಡೆ ಮನೋಭಾವ ತೋರುತ್ತಿದ್ದಾರೆ. ಒಬ್ಬರ ಪರಿಸ್ಥಿತಿ ಈಗಾದರೆ ಉಳಿದ ರೈತರ ಪರಿಸ್ಥಿತಿ ಏನಾಗಿರಬಹುದು ಅನ್ನದಾತನಿಗೆ ಅನ್ಯಾಯ ಮಾಡಿದರೆ ಅಧಿಕಾರಿ ಹಾಗೂ ಸಂಸ್ಥೆ ವಿರುದ್ಧ ಪತ್ರಿಭಟನೆ ನಡೆಸಿ ತಕ್ಕಪಾಠ ಕಲಿಸಲಾಗುವುದು ಎಂದು ಕಿಸಾನ ಬ್ಲಾಕ್ ಘಟಕ ಅಧ್ಯಕ್ಷ ರಮೇಶ್ ಕನಕದಾಸ್ ಎಚ್ಚರಿಸಿದ್ದಾರೆ.

 

Leave a Reply

Your email address will not be published.