ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಸ್ವಸ್ಥ


ಚೆನ್ನೈ(ತಮಿಳುನಾಡು): ಮಾಜಿ ಮುಖ್ಯಮಂತ್ರಿ, ಡಿ.ಎಂ.ಕೆ. ವರಿಷ್ಠ  ಎಂ.ಕರುಣಾನಿಧಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಒಳಗಾಗಿದ್ದಾರೆ.

ಜ್ವರ ಹಾಗೂ ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿರುವ ಕರುಣಾನಿಧಿ ಅವರಿಗೆ ಗೋಪಾಲಪುರಂನಲ್ಲಿರುವ ಅವರ ನಿವಾಸದಲ್ಲಿಯೇ ಕಾವೇರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

94 ವರ್ಷ ವಯಸ್ಸಿನ ಕರುಣಾನಿಧಿ ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿದ್ದವರು, ಸದ್ಯ ಅವರು ಸಕ್ರಿಯ ರಾಜಕೀಯದಲ್ಲಿಲ್ಲವಾದರೂ ಪುತ್ರ ಸ್ಟಾಲಿನ್ ಮೂಲಕ ಎಲ್ಲಾ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published.