ಬುದ್ಧಿಜೀವಿಗಳಿಂದ ದೇಶ ಹಾಳಾಗುತ್ತಿದೆ: ನಾನು ಗೃಹಮಂತ್ರಿಯಾಗಿದ್ದರೆ ಗುಂಡು ಹೊಡೆಯಲು ಹೇಳ್ತಿದ್ದೆ ಎಂದ ಯತ್ನಾಳ !!


ವಿಜಯಪುರ : ಬುದ್ಧಿಜೀವಿಗಳಿಂದ , ದೇಶದ್ರೋಹಿ ಸಂಘಟನೆಗಳಿಂದ ನಮ್ಮ ದೇಶ ಹಾಳಾಗುತ್ತಿದೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ ಕಳವಳ ವ್ಯಕ್ತಪಡಿಸಿದ್ದು, ತಾವು ಗೃಹಮಂತ್ರಿಯಾಗಿದ್ದರೆ ಗುಂಡು ಹೊಡೆಯಲು ಆದೇಶಿಸುತ್ತಿದ್ದೆ ಎಂದು ಹೇಳಿದ್ದಾರೆ !

ಸೈನಿಕರು ಸಾಯಲು ಗಡಿಗೆ ಹೋಗುತ್ತಾರೆ ಎಂದು ದಿನೇಶ ಅಮೀನಮಟ್ಟು ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದೂ ಯತ್ನಾಳ ಟೀಕಿಸಿದರು.

1947 ರಲ್ಲಿಯೇ ಪಾಕ್ ಗೆ ಏನು ಬೇಕೋ ಅದನ್ನು ಕೊಟ್ಟಿದ್ದೇವೆ. ಸರದಾರ ಪಟೇಲ ಬದುಕಿದ್ದರೆ ಜಮ್ಮು-ಕಾಶ್ಮೀರಕ್ಕೆ 370 ನೇ ಕಾಯ್ದೆ ಇರುತ್ತಿರಲಿಲ್ಲ. ನಮ್ಮ ಪ್ರಧಾನಿ ಮೋದಿಗೂ ಆಸೆ ಇದೆ. ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಕಲಮು ತೆಗೆಯುತ್ತಾರೆ ಎಂದು ಹೇಳಿದರು.

Leave a Reply

Your email address will not be published.