ಜು. 31 ರಂದು ಸುವರ್ಣಸೌಧದ ಮುಂದೆ ಪ್ರತ್ಯೇಕ ಕರ್ನಾಟಕ ಧ್ವಜ ಹಾರಿಸಿ ತೀರುತ್ತೇವೆ


ಬೆಳಗಾವಿ: ಜು. 31 ರಂದು  ಸುವರ್ಣಸೌಧ ಎದುರು ಪ್ರತ್ಯೇಕ ಕರ್ನಾಟಕ ಧ್ವಜ ಹಾರಿಸುವುದಾಗಿ ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನಾಗೇಶ ಗೊಲ್ಲಶೆಟ್ಟಿ, ಜಿಲ್ಲಾಧ್ಯಕ್ಷ ಅಡಿವೇಶ ಇಟಗಿ ಹೇಳಿದ್ದಾರೆ.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ತಾರಮತ್ಯ ಖಂಡಿಸಿ  ಮಠಾಧೀಶರ ನೇತೃತ್ವದಲ್ಲಿ ಸುವರ್ಣ ಸೌಧದ ಎದುರು ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗೃಹಕ್ಕೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲವಿದೆ. ಮಠಾಧೀಶರೊಂದಿಗೆ ಚರ್ಚಿಸಿ ಸುವರ್ಣ ಸೌಧದ ಎದುರು ಪ್ರತ್ಯೇಕ  ಕರ್ನಾಟಕ ಧ್ವಜ ಹಾರಿಸುವುದಾಗಿ ಹೇಳಿದರು.

ಇನ್ನೂ ಶಾಸಕ ಶ್ರೀರಾಮುಲು ಉತ್ತರ ಕರ್ನಾಟಕ ಹೋರಾಟದ ನೇತೃತ್ವವಹಿಸುವುದಾಗಿ ಹೇಳಿಕೆ ನೀಡಿದ್ದಾರೆ. ಈ ರೀತಿ ಹೇಳಲು ಅವರಿಗೆ ನೈತಿಕತೆ ಇಲ್ಲ. ಅವರ ನಾಯಕತ್ವ ನಮಗೆ ಬೇಕಾಗಿಲ್ಲ. ಉತ್ತರ ಕರ್ನಾಟಕಕ್ಕೆ ಶ್ರೀರಾಮುಲು ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಮೂರು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಉತ್ತರ ಕರ್ನಾಟಕವನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ವಿನಹಃ ಅಭಿವೃದ್ದಿಗಾಗಿ ಶ್ರಮಿಸುತ್ತಿಲ್ಲ. ನಮ್ಮ ಸಂಘಟನೆ 13 ಜಿಲ್ಲೆಯ ಜನತೆಯ ಜನಾಭಿಪ್ರಾಯವನ್ನು ಸಂಗ್ರಹಿಸಿದೆ.  ಪ್ರತ್ಯೇಕ ರಾಜ್ಯವಾದಾಗಲೇ ಅಭಿವೃದ್ದಿ ಕಾಣಲಿದೆ.

ಸಿಎಂ ಕುಮಾರಸ್ವಾಮಿ ಬಂದ್ ಬೇಡ ಚರ್ಚೆಗೆ ಆಹ್ವಾನ ನೀಡಿದ್ದಾರೆ. ನಾಲ್ಕು ಗೋಡೆ ಮಧ್ಯೆ ಚರ್ಚೆ ಮಾಡುವ ಬದಲು ಬಹಿರಂಗ ಚರ್ಚೆ ಬನ್ನಿ ಎಂದು ಸಿಎಂಗೆ ಇಟಗಿ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ  ಶ್ರೀಕಾಂತ ಮಾದುಭರಮನ್ನವರ, ಪ್ರಶಾಂತ ದೇಸಾಯಿ, ಗಂಗಾಧರ ಅಗಶಿಮನಿ, ಪಕ್ರುದ್ದೀನ್ ಅಲಿಸಾಬನ್ನವರ್, ವಿನೋದ ಕುಮಾರ ತಾರಿಹಾಳ ಇತರರು ಇದ್ದರು.

Leave a Reply

Your email address will not be published.