ಇಂದು ಬೆಳಗಾವಿಗೆ ಬಿ.ಎಸ್. ವೈ


ಬೆಳಗಾವಿ: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ , ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ.

ಉತ್ತರ ಕರ್ನಾಟಕ ನಿರ್ಲಕ್ಷ್ಯ ಖಂಡಿಸಿ ಸುವರ್ಣ ಸೌಧದ ಎದುರು ಇಂದು ಮಠಾಧೀಶರು ನಡೆಸಲಿರುವ ಧರಣಿ ಸಂದರ್ಭದಲ್ಲಿ ಬಿಎಸ್ ವೈ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಪ್ರಮುಖ ಕಚೇರಿಗಳನ್ನು ಸುವರ್ಣ ಸೌಧಕ್ಕೆ ವರ್ಗಾಯಿಸುವ ಮೂಲಕ  ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮಠಾಧೀಶರ ಜತೆಗೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ನಾಗನೂರು ಮಠ, ಹುಕ್ಕೇರಿಮಠ ಸೇರಿದಂತೆ ಹಲವು ಮಠಾಧೀಶರು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ.

Leave a Reply

Your email address will not be published.