ಉತ್ತರ ಕರ್ನಾಟಕ ಬಂದ್ ಬೇಡ, ಮಾತುಕತೆಗೆ ಬನ್ನಿ ಎಂದ ಸಿಎಂ, ಡಿಸಿಎಂ


ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ , ಈ ಕುರಿತಂತೆ ಚರ್ಚೆಗೆ ಸಿದ್ದ ಎಂದು ಹೇಳಿದ್ದಾರೆ.

ಬಜೆಟ್ ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಖಂಡಿಸಿ ಆ. 2 ರಂದು ಉತ್ತರ ಕರ್ನಾಟಕ ಬಂದ್ ಕರೆ ನೀಡಿರುವ ಕುರಿತಂತೆ ಇಬ್ಬರೂ ನಾಯಕರು ಬೆಂಗಳೂರಿನಲ್ಲಿ ಪ್ರತ್ಯೇಕ ಹೇಳಿಕೆ ನೀಡಿದ್ದು, ಅಖಂಡ ಕರ್ನಾಟಕದ ಬಗ್ಗೆ ತಮಗೆ ಸಂಪೂರ್ಣ ಕಾಳಜಿ ಇದೆ. ಯಾವುದೇ ಕಾರಣಕ್ಕೂ ಬಂದ್ ನಂತಹ ಪ್ರಕ್ರಿಯೆಗಳು ಬೇಡ. ನಾವ್ಯಾರೂ ಯಾವ ಭಾಗಕ್ಕೂ ಅನ್ಯಾಯ ಮಾಡಿಲ್ಲ. ಬಂದ್ ಕರೆ ನೀಡಿದವರು ಮಾತುಕತೆಗೆ ಬರಬೇಕು ಎಂದು ಮನವಿ ಮಾಡಿದರು.

ಬಂದ್ ಗೆ ಮುಂದಾಗಿರುವ ಎಲ್ಲ ಸಂಘಟನೆಗಳ ನಾಯಕರು ಬಹಿರಂಗ ಚರ್ಚೆಗೆ ಬಂದರೆ ತಾವು ಮಾತುಕತೆಗೆ ಸಿದ್ದ ಎಂದು ಕುಮಾರಸ್ವಾಮಿ ಸ್ಷಷ್ಟಪಡಿಸಿದರು.

Leave a Reply

Your email address will not be published.