ಬೇಜವಾಬ್ದಾರಿ ನಡೆ: ದಾವಣಗೆರೆಯಲ್ಲಿ ಖಾಸಗಿ ಆಸ್ಪತ್ರೆ ಸಿಜ್


ದಾವಣಗೆರೆ: ಇಲ್ಲಿನ ಗುರುಶ್ರೀ ಆಸ್ಪತ್ರೆಯನ್ನು ಮಹಾನಗರ ಪಾಲಿಕೆ ಸಿಜ್ ಮಾಡಿರುವ ಘಟನೆ ಶನಿವಾರ ನಡೆದಿದೆ.  

ವೈದ್ಯಕೀಯ ತ್ಯಾಜ್ಯ ನಿರ್ವಹಣೆ ನಿಯಮ ಗಾಳಿಗೆ ತೂರಿದ ಆರೋಪದಡಿ  ಆಸ್ಪತ್ರೆಯ ಲ್ಯಾಬ್ ಹಾಗೂ ಕಚೇರಿಯನ್ನು ಪಾಲಿಕೆ ಸಿಬ್ಬಂದಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. 

ಇತ್ತೀಚೆಗೆ ಜಿಲ್ಲಾ ಆರೋಗ್ಯಾಧಿಕಾರಿ ತ್ರಿಪುಲಾಂಬ ಆಸ್ಪತ್ರೆ ಮೇಲೆ ದಾಳಿ ನಡೆಸಿ ನೋಟೀಸ್ ನೀಡಿದ್ದರು. ಆದರೂ ಆಸ್ಪತ್ರೆಯವರು ಬೇಜವಾಬ್ದಾರಿ ನಡೆ ಅನುಸರಿಸಿದ ಕಾರಣ ಪಾಲಿಕೆ ಇಂದು ಆಸ್ಪರೆಯನ್ನು ಸೀಜ್ ಮಾಡಿದೆ. 

ನಗರದಲ್ಲಿ  ಎಲ್ಲೆಂದರಲ್ಲಿ  ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್ ಗಳು ವೈದ್ಯಕೀಯ ತ್ಯಾಜ್ಯ ಸುರಿಯುತ್ತಿವೆ. ಇದರಿಂದ ಸದಾ ಸ್ಥಳಿಯರು ರೋಗರುಜಿನಗಳು ಹರಡುವ ಆತಂಕದಲ್ಲಿರುತ್ತಾರೆ. 

Leave a Reply

Your email address will not be published.