ರವೀಂದ್ರನಾಥ್ ಗೆ ಇಚ್ಚಾಶಕ್ತಿ ಇದ್ದರೆ ಇನ್ನೊಂದು ಗಾಜಿನಮನೆ ನಿರ್ಮಿಸಲಿ: ಡಾ. ಎಸ್.ಶಿವಶಂಕರಪ್ಪ


ಜಲಸಿರಿ : ನೀರಿನ ಟ್ಯಾಂಕ್ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ

ದಾವಣಗೆರೆ:  ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರನಾಥ್ ಅವರಿಗೆ ಇಚ್ಚಾಶಕ್ತಿ ಇದ್ದಲ್ಲಿ ದಾವಣಗೆರೆಯಲ್ಲಿ ಇನ್ನೊಂದು ಗಾಜಿನಮನೆ ನಿರ್ಮಿಸಲಿ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸವಾಲು ಹಾಕಿದರು.
ಜಲಸಿರಿ ಮತ್ತು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ  ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ದಾವಣಗೆರೆಯಲ್ಲಿ ಈಗಾಗಲೇ ಹಿಂದಿನ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡ ಗಾಜಿನಮನೆಯನ್ನು ಮತ್ತೆ ಉದ್ಘಾಟನೆಗೆ ಸಿದ್ದತೆ ನಡೆಸಿರುವ ರವೀಂದ್ರನಾಥ್ ಅವರಿಗೆ ದಾವಣಗೆರೆ ನಗರದ ಬಗ್ಗೆ ನಿಜವಾಗಲೂ ಕಾಳಜಿ, ಬದ್ಧತೆ ಇದ್ದಲ್ಲಿ ಇನ್ನೊಂದು ಗಾಜಿನಮನೆ ನಿರ್ಮಿಸಲಿ ಎಂದರು.
ಕಳೆದ ವಾರ ಈ ಹಿಂದೆ ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದ ವೇಳೆ ನೀರಾವರಿ ಇಲಾಖೆಯಿಂದ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಿದ್ದರೂ ಸಹ ರವೀಂದ್ರನಾಥ್ ಅವರು ಮತ್ತೊಮ್ಮೆ ಅದೇ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದು ದೂರಿದರು.
ದಾವಣಗೆರೆ ನಗರಕ್ಕೆ ಶಾಶ್ವತವಾಗಿ ಸಮರ್ಪಕ ನೀರು ಸರಬರಾಜು ಮಾಡಬೇಕೆಂಬ ಉದ್ದೇಶದಿಂದ ಎಸ್.ಎಸ್.ಮಲ್ಲಿಕಾರ್ಜುನ್ ಅವರು 535 ಕೋಟಿ ಮೊತ್ತದ ಜಲಸಿರಿ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ಪಡೆದು ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸಿದ್ದು, ಇದೀಗ ಈ ಜಲಸಿರಿ ಯೋಜನೆಯಡಿ ನಿರ್ಮಾಣವಾಗುವ 19 ಓವರ್‍ಹೆಡ್ ಟ್ಯಾಂಕ್‍ಗಳ ಪೈಕಿ ಇಂದು ಬಾಷಾನಗರದಲ್ಲಿ 15 ಲಕ್ಷ ಗ್ಯಾಲನ್ ಹಾಗೂ ಯರಗುಂಟೆಯಲ್ಲಿ 8 ಲಕ್ಷ ಗ್ಯಾಲನ್ ಸಂಗ್ರಹದ ಓವರ್‍ಹೆಡ್ ಟ್ಯಾಂಕ್‍ಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಮಳೆ ಇಲ್ಲದ ಸಂದರ್ಭದಲ್ಲೂ ಸಹ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗಿದ್ದು, ಇದೀಗ ವಾರಕ್ಕೇರಡು ಬಾರಿ ನೀರು ಪೂರೈಸಲಾಗಿದ್ದು, ಮುಂದಿನ ವಾರದಿಂದ 2 ದಿನಕ್ಕೊಮ್ಮೆ ನೀರು ಪೂರೈಸಲಾಗುವುದು ಎಂದರು.
ಕೆಲವರು ನಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿ ನಾಗರೀಕರನ್ನು ದಾರಿ ತಪ್ಪುಸುತ್ತಿದ್ದು, ನಾಗರೀಕರು ತಮ್ಮ ಕಷ್ಟಗಳಿಗೆ ನೆರವಾಗಿ ನಮ್ಮನ್ನು ಭೇಟಿ ಮಾಡಿ ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುತ್ತೇವೆ ಎಂದು ತಿಳಿಸಿದರು.
ಜಲಸಿರಿ 24×7  ಕುಡಿಯುವ ನೀರು ಸರಬರಾಜು ಯೋಜನೆಯಡಿ ದಾವಣಗೆರೆ ನಗರಕ್ಕೆ 19 ಟ್ಯಾಂಕಗಳು ಮಂಜೂರಾಗಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ. 3, 7, 9 ರಲ್ಲಿ  2 ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣದ ಕಾಮಗಾರಿ ಹಾಗೂ 2017-18ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಡಿಯಲ್ಲಿ  ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ವಾರ್ಡ್ ನಂ.8ರ ವಿಜಯನಗರ ಬಡಾವಣೆಯಲ್ಲಿ ಬರುವ 3ನೇ ಮೇನ್ 4ನೇ ಅಡ್ಡರಸ್ತೆಯಲ್ಲಿನ ರಾಮಚಂದ್ರ ಎಸ್.ಕುಲಕರ್ಣಿಯವರ ಮನೆಯಿಂದ ಸಾಯಿನಾಥ ಕಾಂಪ್ಲೇಕ್ಸ್‍ವರೆಗೆ 22 ಲಕ್ಷ ರೂ ಮೊತ್ತದ ಸಿ.ಸಿ.ರಸ್ತೆ ಹಾಗೂ ದಾವಣಗೆರೆ ವಾರ್ಡ್ ನಂ.10 ರ ಮೈಲಾರ ಲಿಂಗೇಶ್ವರ ದೇವಸ್ಥಾನ ಎದುರಿನ ಬಾಬಣ್ಣ ಅಂಗಡಿ ಪಕ್ಕದ ಕನ್ಸರ್‍ವೆನ್ಸಿಯಲ್ಲಿ 02.48 ಲಕ್ಷ ರೂ. ಮೊತ್ತದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಮೇಯರ್  ಶೋಭಾ ಪಲ್ಲಾಗಟ್ಟೆ, ಉಪ ಮೇಯರ್  ಕೆ.ಚಮನ್‍ಸಾಬ್,  ಹೆಚ್.ತಿಪ್ಪಣ್ಣ, ಸುರೇಂದ್ರ ಮೊಯಿಲಿ, ಶ್ರೀಮತಿ ಅನ್ನಪೂರ್ಣಮ್ಮ ಪೂಜಾರ್ ಬಸವರಾಜ್, ಕೆ.ಆರ್.ಮಹಿಬೂಬ್ ಸಾಬ್, ಸದಸ್ಯರುಗಳಾದ ದಿನೇಶ್ ಕೆ.ಶೆಟ್ಟಿ,  ಬಸಪ್ಪ, ಹೆಚ್.ಬಿ.ಗೋಣೆಪ್ಪ ಇತರರು ಇದ್ದರು.

Leave a Reply

Your email address will not be published.